ಮಂಗಳೂರು : ರಾಜ್ಯದ ದೇವಾಲಯಗಳು ಭಕ್ತಿಯ ಜೊತೆಗೆ ಆದಾಯದ ಕೇಂದ್ರಗಳು. ದೇವರ ದರ್ಶನಕ್ಕೇ ಹೋಗುವವರು ದರ್ಶನ ಆದ ಮೇಲೆ ದೇವರ ಹುಂಡಿಗೆ ದುಡ್ದು ಹಾಕುತ್ತಾರೆ. ಅರ್ಚಕರ ಆರತಿ ತಟ್ಟೆಗೂ ಹಣ ಹಾಕಿ ಭಕ್ತಿ ಪ್ರದರ್ಶಿಸುತ್ತಾರೆ.

ಕರ್ನಾಟಕದಲ್ಲಿ ಭಕ್ತರನ್ನು ಆಕರ್ಷಿಸುವ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಬಹಳಷ್ಟು ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರಿದವು.

2023 ಮತ್ತು 2024ನೇ ಸಾಲಿನ ದೇವಾಲಯಗಳ ಆದಾಯದ ವಿವರಗಳು ಹೊರ ಬಂದಿವೆ. ಕೆಲವು ದೇವಾಲಯಗಳಿಗೆ ಬರುವ ಆದಾಯ ನೋಡಿದರೆ ಆಶ್ಚರ್ಯವಾಗಬಹುದು.

ಈ ಬಾರಿಯೂ ಆದಾಯದ ಮೊದಲ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ್ದು. ಸತತ 13 ವರ್ಷಗಳಿಂದ ಈ ದೇವಾಲಯದ್ದೇ ಮೊದಲ ಸ್ಥಾನ. ಈ ದೇವಾಲಯಕ್ಕೆ ಬಂದ ಆದಾಯ 146 ಕೋಟಿ ರೂಪಾಯಿಗಳು. ಉಳಿದಂತೆ ಕೊಲ್ಲೂರು ಮುಕಾಂಬಿಕಾ ದೇವಾಲಯ ಎರಡನೆಯ ಸ್ಥಾನದಲ್ಲಿದೆ. ಈ ದೇವಾಲಯದ ಆದಾಯ 68 ಕೋಟಿ ರೂಪಾಯಿ. ನಂಜನಗೂಡೂ ಶ್ರೀಕಂಠೇಶ್ವರ ದೇವಾಲಯಕ್ಕೆ ಬಂದ ಆದಾಯ 30 ಕೋಟಿ ರೂಪಾಯಿಗಳು.

Author

Leave a Reply

Your email address will not be published. Required fields are marked *