ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೋಲಿನ ಸರಮಾಲೆಯನ್ನು ಮುಂದುವರಿಸಿದೆ. ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಿನ್ನೆ ಅವಮಾನಕರ ಸೋಲು ಅನುಭವಿಸಿತು.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಆಟದ ಎಲ್ಲ ವಿಭಾಗಗಳಲ್ಲೂ ಮುಗ್ಗರಿಸಿತು. ಇಡೀ ಪಂದ್ಯದಲ್ಲಿ ಒಂದೇ ಒಂದು ಆಶಾದಾಯಕ ಅಂಶ ಎಂದರೆ ವಿರಾಟ್ ಕೊಯ್ಲಿ ಅವರ ಶತಕ ಮಾತ್ರ. ಉಳಿದಂತೆ ಎಲ್ಲವೂ ಶೂನ್ಯ,
ಮೊದಲು ಬ್ಯಾಟ್ ಮಾಡಿದ ಆರ್ ಸಿ ಬಿ 183 ರನ್ ಗಳಿಸಿತು. ಇದು ಚಾಲೇಂಜಿಂಗ್ ಮೊತ್ತವೇ ಆಗಿತ್ತು.
ಆದರೆ ಕಳಪೆ ಫೀಲ್ಡೀಂಗ್ ಆರ್ ಸಿ ಬಿ ಗೆ ಮುಳುವಾಯಿತು. 19 ನೆಯ ಓವರ್ ನಲ್ಲೇ ರಾಜಸ್ಥಾನ್ ರಾಯಲ್ಸ್ ಗುರಿ ತಲುಪಿತು. ಜಯ ಒಲಿಯಿತು.
ತಮ್ಮ ಫಾರ್ಮ್ ಕಳೆದುಕೊಂಡಿದ್ದ ಬಟ್ಲರ್ ಮತ್ತೆ ಫಾರ್ಮ್ ಗೆ ಮರಳಿದಿರು. ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಜೊತೆ ಅದ್ಭುತ ಆಟ ಆಡಿದರು. ಇವರಿಬ್ಬರೂ ಮೈದಾನದ ಎಲ್ಲೆಡೆ ಬಾಲ್ ಅನ್ನು ಚಚ್ಚತೊಡಗಿದರು. ಆಗ ಆರ್ ಸಿಬಿ ಎನೂ ಮಾಡಲಾಗದೇ ಅಸಹಾಯಕ ತಂಡವಾಗಿ ಗೋಚರಿಸಿತು.
ಗೆಲುವಿಗೆ 184 ರನ್ ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡ 19.1 ಓವರ್ಗಳಲ್ಲಿ 4 ವಿಕೆಟ್ ಗೆ 189 ರನ್ ಬಾರಿಸಿ ಸುಲಭವಾಗಿ 6 ವಿಕೆಟ್ ಗಳ ಜಯ ಗಳಿಸಿತು.. 58 ಎಸೆತಗಳಲ್ಲಿ ಶತಕ ಬಾರಿಸಿದ ಜೋಸ್ ಬಟ್ಲರ್ ಗೆಲುವಿನ ರೂವಾರಿಯಾದರು.. ಅವರದ್ದು ಕೂಡ ಐಪಿಎಲ್ನಲ್ಲಿ 6ನೇ ಶತಕ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಗೆಲುವು. ಅಲ್ಲದೆ ನಾಲ್ಕು ಗೆಲುವುಗಳ ಸಮೇತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ರಾಜಸ್ಥಾನ್ ರಾಯಲ್ಸ್ ದಾಯಿತು.
.
