ರಾಜಸ್ಥಾನ ರಾಯಲ್ ಆಟ; ಮುಂಬೈಗೆ ಸೋಲಿನ ಕಾಟ , ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

RR vs MI IPL 2024 Highlight : 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ 19ನೇ ಓವರ್‌ನಲ್ಲಿ ಜೈಸ್ವಾಲ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಜೈಪುರ : ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ನಿನ್ನೆ ಕೂಡ ರಾಜಸ್ಥಾನದ್ದೇ ವಿಜಯ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 179 ರನ್ ಪೇರಿಸಿತ್ತು. ಮುಂಬೈ ನೀಡಿದ 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಸಿಡಿಸಿದ್ದರು. ಅಲ್ಲದೆ 19ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಮುಂಬೈ ಇಂಡಿಯನ್ಸ್ ಪರ ಓಪನಿಂಗ್ ಮಾಡಲು ಬಂದಿದ್ದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮತ್ತೆ ವಿಫಲರಾದರು. ರೋಹಿತ್ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರೇ ಕಿಶನ್ ಶೂನ್ಯಕ್ಕೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಯಾದವ್ 8 ಎಸೆತಗಳಲ್ಲಿ 10 ರನ್ ಮಾತ್ರ ಗಳಿಸಿದರು.
ನಂತರ ತಿಲಕ್ ವರ್ಮಾ ಮತ್ತು ನೇಹಾಲ್ ವಧೇರಾ ಸ್ಫೋಟಕ ಬ್ಯಾಟಿಂಗ್ . ಮುಂಬೈ ಪರ ತಿಲಕ್ ಅದ್ಭುತ ಬ್ಯಾಟಿಂಗ್ ನಡೆಸಿ 45 ಎಸೆತಗಳಲ್ಲಿ ಒಟ್ಟು 65 ರನ್ ಪೇರಿಸಿದರು.

ಮೊಹಮ್ಮದ್ ನಬಿ 17 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ತನ್ನ ಮೊದಲ ಪಂದ್ಯದಲ್ಲಿ ನೇಹಾಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ನೆಹಾಲ್ 24 ಎಸೆತಗಳಲ್ಲಿ 49 ರನ್ ಗಳಿಸಿದರು ನೆಹಾಲ್ 4 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ಈ ಮೂಲಕ ಮುಂಬೈ ತಂಡದ ಸ್ಕೋರ್ 20 ಓವರ್ ಗಳಲ್ಲಿ 179 ರನ್ ತಲುಪಿತು.

ರಾಜಸ್ಥಾನ್ ರಾಯಲ್ಸ್ ಪರ ಸಂದೀಪ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ ಒಟ್ಟು 5 ವಿಕೆಟ್ ಪಡೆದರು. ಸಂದೀಪ್ ಅವರ ಸ್ಪೆಲ್‌ನಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್ ಮತ್ತು ಜೆರಾಲ್ಡ್ ಕೋಟ್ಜಿ ಅವರ ವಿಕೆಟ್ ಪಡೆದರು. ಸಂದೀಪ್ ತಮ್ಮ 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿದರು ಸಂದೀಪ್ ಶರ್ಮಾ ಹೊರತುಪಡಿಸಿ, ಟ್ರೆಂಟ್ ಬೌಲ್ಟ್ 2 ವಿಕೆಟ್ ಮತ್ತು ಅವೇಶ್ ಖಾನ್ ಮತ್ತು ಯುಜ್ವೇಂದ್ರ ಚಾಹಲ್ ತಲಾ 1 ವಿಕೆಟ್ ಪಡೆದರು.

Author

error: