IPL 2024 : ಡೆಲ್ಲಿಗೆ ಸೋಲು, ಆರ್ ಸಿಬಿಗೆ 47 ರನ್ ಗಳ ಗೆಲುವು, ಪ್ಲೇ ಆಫ್ ಕನಸು ಜೀವಂತ..!

RCB vs DC Highlights: ಆರ್ ಸಿಬಿ ಪರ ಅಜೇಯ 32 ರನ್ ಹಾಗೂ ಒಂದು ವಿಕೆಟ್ ಪಡೆದ ಕ್ಯಾಮರೂನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಆರ್ ಸಿಬಿ ಪ್ಲೇ ಆಪ್ ಕನಸು ಇನ್ನೂ ಜೀವಂತವಾಗಿದೆ.

ಕ್ರಿಕೆಟ್ ಅದ್ಭುತ ಅಂದರೆ ಇದೇ. ತಂಡ ಮುಳುಗಿತು ಎಂದುಕೊಂಡಿದ್ದು ಎದ್ದು ನಿಲ್ಲಬಹುದು. ಎದ್ದು ನಿಂತಿದ್ದು ಮುಳಗಬಹುದು. ನಿನ್ನೆ ಆದದ್ದು ಇದೇ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ತಂಡ ಗೆಲುವು ಸಾಧಿಸಿತು. ಈ ಮೂಲಕ ಆರ್ ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿ ಉಳಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಆರಂಭಿಕ ಆಟಗಾರರಾದ ಫಾಪ್ ಡು ಪ್ಲೆಸಿಸ್ 6, ವಿರಾಟ್ ಕೊಹ್ಲಿ 27, ರನ್ ಗಳಿಗೆ ಔಟಾಗುವ ಮೂಲಕ ಆರಂಭದಲ್ಲಿ ಅಭಿಮಾನಿಗಳಿಗೆ ಆಘಾತ . ನಂತರ ಜೊತೆಯಾದ ವಿಲ್ ಜಾಕ್ಸ್ 41, ರಜತ್ ಪಾಟಿದಾರ್ 52, ಕ್ಯಾಮರೂನ್ ಗ್ರೀನ್ ಅಜೇಯ 32 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 160 ರ ಗಡಿ ದಾಟಿಸಿದರು. ಉಳಿದಂತೆ ಮಹಿಪಾಲ್ 13, ಕರಣ್ ಶರ್ಮಾ 6 ರನ್ ಗಳಿಸಿದರು. ಆದರೆ, ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ.

188 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಗೆಲುವಿನ ನಗೆ ಬೀರಿತು. ಆರ್ ಸಿಬಿ ಪರ ಯಶ್ ದಯಾಳ್ 3 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್, ಕ್ಯಾಮರೂನ್ ಗ್ರೀನ್ 1, ಲೂಕಿಸ್ ಫಾರ್ಗ್ಯೂಸನ್ 2 ವಿಕೆಟ್ ಪಡೆದರು. ಆರ್ ಸಿಬಿ ಪರ ಅಜೇಯ 32 ರನ್ ಹಾಗೂ ಒಂದು ವಿಕೆಟ್ ಪಡೆದ ಕ್ಯಾಮರೂನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಆರ್ ಸಿಬಿ ಪ್ಲೇ ಆಪ್ ಕನಸು ಇನ್ನೂ ಜೀವಂತವಾಗಿದೆ.

Author

error: