ಭಾಗ್ಯದ ಬಜೆಟ್ “ಈ ವರ್ಷದ ಕೇಂದ್ರ ಬಜೆಟ್ ಪ್ರಗತಿ ಪರವಾಗಿದೆ. ಕೃಷಿಕರಿಗೆ, ಮಧ್ಯಮ ವರ್ಗದವರಿಗೆ ಉತ್ತಮ ಬಜೆಟ್. ತೆರಿಗೆದಾರರಿಗೆ ತೆರಿಗೆ ಹೊರೆ ಕಡಿಮೆ ಆಗಲಿದೆ. ಹೊಸ ತೆರಿಗೆದಾರರಿಗೆ ಪರಿಷ್ಕರಣೆ ಆಗಲಿದೆ . ರಕ್ಷಣಾ ವಲಯಕ್ಕೆ ಹೆಚ್ಚು ಮೀಸಲು. ಪ್ರತೀ ಕ್ಷೇತ್ರದ ಉದ್ದೇಶ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ.
ಕಿಸಾನ್ ಕಾರ್ಡ್ದಾರದಿಗೆ 3 ಲಕ್ಷದಿಂದ 5 ಲಕ್ಷಕ್ಕೆ ವಿಸ್ತರಣೆ ಮಾಡಿರುವುದು. ಇದು ಬಡತನ ನಿರ್ಮೂಲನೆ ಮಾಡಲು ಹೊರಟಿರುವ ಬಜೆಟ್ ಆಗಿದೆ. ಕ್ಯಾನ್ಸರ್ ಔಷಧಿ ಮೇಲಿನ ಕಷ್ಟಮ್ಸ್ ಸುಂಕ ವಿನಾಯಿತಿ ಆಗಲಿದೆ. ಅತೀ ಬೇಗನೆ ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಸೆಂಟರ್ ಸ್ಥಾಪನೆ ಮಾಡುವ ಘೋಷಣೆ ಮಾಡಿರುವುದು ತುಂಬಾ ಖುಷಿಯ ವಿಚಾರ. ಹಾಗೆ ಆರೋಗ್ಯದ ದ್ರಷ್ಟಿಯಿಂದ ಬಾಣoತಿಯರಿಗೆ ಪೌಷ್ಟಿಕಾಂಶಭರಿತ ಆಹಾರ ವಿತರಣೆ, ಆರೋಗ್ಯ ವಿಮೆ ವಿಸ್ತರಣೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ.
ಅಲ್ಲದೆ ಅತೀ ಹೆಚ್ಚು ಉದ್ಯೋಗವಕಾಶ ಕೊಡುವ ಉದ್ದೇಶದಿಂದ ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಪ್ರಧಾನ ಮಂತ್ರಿ ‘ಧನ -ಧಾನ್ಯ ‘ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಾಯಕವಾಗಿದೆ. ಅಲ್ಲದೆ ಇದರ ಮೂಲಕ ಕೃಷಿಕರಿಗೆ ಅಲ್ಪವಧಿ ಮತ್ತು ದೀರ್ಘಾವಧಿ ಸಾಲದ ಲಭ್ಯತೆ ನೀಡುವುದಾಗಿದೆ. ನಗರ ಪ್ರದೇಶದ ಅಭಿವೃದ್ಧಿಗೆ ಮೂಲ ಸೌಕರ್ಯ, ಕುಡಿಯುವ ನೀರು. ಉತ್ತೇಜನ ನೀಡಲಾಗಿದೆ. ಈ ಮೂಲಕ ಎಲ್ಲ ಸಾಮಾನ್ಯ ಜನರಿಗೆ ಖುಷಿ ನೀಡಿರುವ ಬಜೆಟ್ ಇದಾಗಿದೆ.

– ನೇತ್ರಾವತಿ ನಾಯ್ಕ್.
ಅರ್ಥಶಾಸ್ತ್ರ ಉಪನ್ಯಾಸಕಿ.
ಸರಕಾರಿ ಪ್ರಥಮ ದರ್ಜೆ ಕಾಲೇಜು. ಭಟ್ಕಳ







