ಬೆಂಗಳೂರು : ನಟಿ ಪವಿತ್ರಾ ಜಯರಾಮ್ ಸಾವಿನಿಂದ ಮನನೊಂದು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕಾರ್ತಿಕ ದೀಪಂ’, ‘ರಾಧಮ್ಮ ಪೆಲ್ಲಿ’, ‘ತ್ರಿನಯನಿ’ ಮತ್ತು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಚಂದು ಅವರು ಮೇ 12 ರಂದು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಿವಿ ನಟಿ ಪವಿತ್ರಾ ಜಯರಾಮ್ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತ್ರಿನಯನಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಚಂದು ಹೆಸರು ವಾಸಿಯಾಗಿದ್ದಾರೆ. 2015 ರಲ್ಲಿ ಶಿಲ್ಪಾ ಅವರನ್ನು ವಿವಾಹವಾದ ಚಂದು ಅವರಿಗೆ ಇಬ್ಬರು ಮಕ್ಕಳಿದ್ದಾರೆ.






