ಸಿಎಂ ಕುರ್ಚಿ ಕಾಳಗ | ವಿರೋಧಿಗಳ ಹಾರಾಟಕ್ಕೆ ‘ಬಂಡೆ’ ಅಡ್ಡಗಾಲು : ಇಷ್ಟಾರ್ಥ ಸಿದ್ದಿಗೆ ದೇವರ ಮೊರೆ

Siddaramaiah-vs-D K Shivakumar : ಸಿಎಂ ಬೆಂಬಲಿಗರ ತಂತ್ರ ಅರಿತ ಕಾಂಗ್ರೆಸ್​ನ ಚುನಾವಣಾ ಚಾಣಕ್ಯ ಡಿಕೆಶಿ ಇದೀಗ ವಿರೋಧಿಗಳಿಗೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಡಿನ್ನರ್​​​ ಕೂಟಗಳಿಗೆ ಹೈಕಮಾಂಡ್​​​ ಮೂಲಕ ಬ್ರೇಕ್​​ ಹಾಕಿಸಿದ್ದಾರೆ.

ವಿಶೇಷ ವರದಿ

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್​ಗೆ ಭದ್ರಬುನಾದಿಯಾಗಿರುವ ಕರ್ನಾಟಕದಲ್ಲೂ ಪಕ್ಷ ಮನೆಯೊಂದು ಮೂರು ಬಾಗಿಲಾಗಿದೆ. ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಬಣದ ಮಧ್ಯೆ ಕಾಳಗ ಇದೀಗ ತಾರಕಕ್ಕೇರಿದೆ. ಸಿದ್ದರಾಮಯ್ಯ ಬಳಿಕ ಸಿಎಂ ಸ್ಥಾನಕ್ಕೆ ಟವಲ್​ ಹಾಕಿರುವ ಡಿಕೆಶಿ ಆಸೆಗೆ ತಣ್ಣೀರೆರಚಲು ಸಿದ್ದು ಬಣದ ನಾಯಕರು ಮುಂದಾಗಿದ್ದಾರೆ. ಡಿಸಿಎಂ ವಿರುದ್ಧ ದಲಿತಾಸ್ತ್ರ ಬಿಡಲು ಸಿದ್ದರಾಮಯ್ಯ ಬೆಂಬಲಿಗರು ಹೊರಟ್ಟಿದ್ದಾರೆ. ಹೀಗಾಗಿ ಡಿನ್ನರ್​ ಮಿಟಿಂಗ್​ ನೆಪದಲ್ಲಿ ಡಿಸಿಎಂ ವಿರುದ್ಧ ರಣತಂತ್ರ ರೂಪಿಸುತ್ತಿದ್ದರು.

ಸಿಎಂ ಬೆಂಬಲಿಗರ ತಂತ್ರ ಅರಿತ ಕಾಂಗ್ರೆಸ್​ನ ಚುನಾವಣಾ ಚಾಣಕ್ಯ ಡಿಕೆಶಿ ಇದೀಗ ವಿರೋಧಿಗಳಿಗೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಡಿನ್ನರ್​​​ ಕೂಟಗಳಿಗೆ ಹೈಕಮಾಂಡ್​​​ ಮೂಲಕ ಬ್ರೇಕ್​​ ಹಾಕಿಸಿದ್ದಾರೆ. ಯಾವುದೇ ರೀತಿಯ ಡಿನ್ನರ್​ ಪಾಲಿಟಿಕ್ಸ್​ ನಡೆಸದಂತೆ ಹೈಕಮಾಂಡ್ ​ನಿಂದ ಖಡಕ್​ ಸೂಚನೆ ಹೊರಡಿಸುವಲ್ಲಿ ಚಾಣಕ್ಯ ಡಿಕೆಶಿ ಸಫಲರಾಗಿದ್ದಾರೆ.

ಆದರೆ, ಇದು ಸಿಎಂ ಬೆಂಬಲಿಗರನ್ನ ಕೆರಳಿಸಿದ್ದು, ಸಚಿವ ಕೆ ಎನ್ ರಾಜಣ್ಣ ಬಹಿರಂಗವಾಗಿಯೇ ಡಿಸಿಎಂ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವದಕ್ಕೂ ಸೊಪ್ಪುಹಾಕದ ‘ಕನಕಪುರ ಬಂಡೆ’ ಇಷ್ಟಾರ್ಥ ಸಿದ್ಧಿಗಾಗಿ ಟೆಂಪಲ್​ ರನ್​ ಪ್ರಾರಂಭಿಸಿದ್ದಾರೆ. ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.

ಡಿ.ಕೆ ಶಿವಕುಮಾರ್ ಟೆಂಪಲ್​ರನ್​!

  • ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಪ್ರಯಾಣ
  • ಪ್ರತ್ಯಂಗೀರಾ ದೇವರು & ಕಾಂಚೀಪುರಂನ ದೇಗುಲಕ್ಕೆ ಭೇಟಿ
  • ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ಭೇಟಿಯ ಮಾಹಿತಿ
  • ಬೆಳಿಗ್ಗೆ 10:30ಕ್ಕೆ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಕೆ
  • ಬೆಳಗ್ಗೆ 11:30ಕ್ಕೆ ವರದರಾಜು ಪೆರುಮಾಳ್ ದೇವರ ದರ್ಶನ
  • 2 ದೇಗುಲಗಳ ದರ್ಶನ ಬಳಿಕ ಸಂಜೆ ಬೆಂಗಳೂರಿಗೆ ವಾಪಸ್​​

ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದರು. ಅಲ್ಲಿ ಪ್ರತ್ಯಂಗೀರಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನ ಮಾಡಿಸಿದರು. ಬಳಿಕ 11:30ಕ್ಕೆ ಕಾಂಚಿಪುರಂನ ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿಕೆಶಿ ಭೇಟಿ :

ಈ ಹಿಂದೆ ಕುಂಭಕೋಣಂನಿಂದ ಬೆಂಗಳೂರಿಗೆ ಆಗಮಿಸಿ ಅರ್ಚಕರ ಸಮ್ಮುಖದಲ್ಲಿ ಹೋಮ- ಹವನ ನಡೆಸಿದ್ದರು. ಹೀಗಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಅಂತ ಅರ್ಚಕರು ಸಲಹೆ ನೀಡಿದ್ದರು. ಈ ಹಿನ್ನೆಲೆ ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ ಎನ್ನಲಾಗ್ತಿದೆ.

ಇನ್ನು ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಇದರ ನಡುವೆ ಡಿ.ಕೆ ಶಿವಕುಮಾರ್ ಆರಂಭಿಸಿದ ಟೆಂಪಲ್​​ ರನ್​​​ ಕುತೂಹಲಕ್ಕೆ ಕಾರಣವಾಗಿದೆ.

Author

error: