Channapatna Bypoll Politics: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಡಿಕೆ ಶಿವಕುಮಾರ್ ತಂತ್ರ

Channapatna Bypoll Politics: ಕುಮಾರಸ್ವಾಮಿ ಅವರು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಖುದ್ದು ಡಿಸಿಎಂ ಡಿ ಕೆ ಶಿವಕುಮಾರ್ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕನಕಪುರದ ಬಂಡೆ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ

ವಿಶೇಷ ವರದಿ

ವಿಧಾನ ಸಭೆಯಲ್ಲಿ ಕನಕಪುರ ಬಂಡೆ ರಣತಂತ್ರಕ್ಕೆ ಕಮಲ ಮುದೂಡಿದರೆ, ತೆನೆ ಸೊರಗಿತ್ತು. ಅದರಲ್ಲೂ ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸ್ಪೀಪ್ ಮಾಡಲು ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು. ಅದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟ್ರಬಲ್​​ ಶೂಟರ್​​​ಗೆ ದೋಸ್ತಿಗಳು ಬಿಗ್ ಶಾಕ್ ನೀಡಿದ್ರು. ಬಿಜೆಪಿ – ಜೆಡಿಎಸ್ ಸಂಘಟಿತ ಹೋರಾಟದಿಂದ ಹಳೆ ಮೈಸೂರಲ್ಲಿ ಮತ್ತೆ ಕಮಾಲ್ ಮಾಡಿದರು. ಚುನಾವಣೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್​ ಗೆ ಸ್ವಂತ ತಮ್ಮನನ್ನೆ ಗೆಲ್ಲಿಸಲು ಸಾಧ್ಯವಾಗದೇ ಇರೋದು ಅವರ ಮುಖ್ಯಮಂತ್ರಿ ಆಗೋ ಕನಸಿಗೆ ಹಿನ್ನಡೆಯಾಗಿದೆ.

ಇದೀಗ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಡಿಕೆಶಿ ರಣತಂತ್ರ ರೂಪಿಸಿದ್ದಾರೆ. ಸಕ್ಕರೆ ನಾಡು ಮಂಡ್ಯದಿಂದ ಗೆದ್ದು ಕೇಂದ್ರದಲ್ಲಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕ ಸಚಿವರಾದ ಬಳಿಕ ಹೆಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಖುದ್ದು ಡಿಸಿಎಂ ಡಿ ಕೆ ಶಿವಕುಮಾರ್ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕನಕಪುರದ ಬಂಡೆ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಹೌದು ಖುದ್ದು ಡಿಕೆಶಿ ಸ್ಪರ್ಧೆ ಮಾಡೋ ಮೂಲಕ ಕುಮಾರಸ್ವಾಮಿ, ಬಿಜೆಪಿಯ ಸೈನಿಕನ ಶಕ್ತಿಯನ್ನ ರಾಮನಗರ ಜಿಲ್ಲೆಯಲ್ಲಿ ಕುಂದಿಸುವ ಚಿಂತನೆ ಇದೆ. ಮತ್ತೊಂದೆಡೆ ದೇವೇಗೌಡರ ಬಳಿಕ ಒಕ್ಕಲಿಗರ ನಾಯಕರಾಗಲು ಡಿ ಕೆ ಶಿವಕುಮಾರ್​ ಮತ್ತು ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ಕಾಳಗವೇ ನಡೆಯುತ್ತಿದೆ. ಒಮ್ಮೆ ಜೋಡೆತ್ತುಗಳಾಗಿದ್ದ ಇಬ್ಬರು ನಾಯಕರು ಇದೀಗ ಹಾವು – ಮುಂಗುಸಿಯಂತೆ ಕಾದಾಡುತ್ತಿದ್ದಾರೆ. ಪರಸ್ಪರ ಏಕ ವಚನದಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಒಕ್ಕಲಿಗರ ಪ್ರಾಬಲ್ಯವಿರುವ ಚನ್ನಪಟ್ಟಣದಲ್ಲಿ ನಿಂತು ಗೆದ್ದರೆ ತಾನೆ ಒಕ್ಕಲಿಗರ ನಾಯಕನಾಗಗಿ ಮುಖ್ಯಮಂತ್ರಿ ಪಟ್ಟಕ್ಕೆರುವ ಲೆಕ್ಕಾಚಾರವೂ ಇದ್ದಂತೆ ಇದೆ….

ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದರು, ಅವರ ಹಿಂದೆ ಅಹಿಂದ ಸಮಾಜ ಬಂಡೆಯಂತೆ ನಿಂತಿದೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕಾದ್ರೆ ಡಿಸಿಎಂ ಡಿ ಕೆ ಶಿವಕುಮಾರ್​ ಗೆ ಒಕ್ಕಲಿಗರ ಸಮುದಾಯ ಬೆಂಬಲ ಬೇಕೆ ಬೇಕು. ಹೀಗಾಗಿ ಡಿಕೆಶಿ ಖುದ್ದು ಚನ್ನಪಟ್ಟಣದಿಂದ ಕಣಕ್ಕಿಳಿಯುವ ಇಚ್ಚೇಯನ್ನ ಅವರು ವ್ಯಕ್ತಪಡಿಸಿದ್ದಾರೆ. ಡಿಕೆಶಿ ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಸುತ್ತಾಡಿ ಜನರ ಮತ್ತು ಕಾರ್ಯಕರ್ತರ ನಾಡಿ ಮಿಡಿತ ಅರಿಯಲು ಮುಂದಾಗಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ನಿಂತು ಗೆದ್ದ ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ. ಹೆಚ್ ಡಿಕೆ ಜೊತೆಗೆ ಈ ಹಿಂದೆ ಕೆಂಗಲ್ ಹನುಮಂತಯ್ಯ ಇಲ್ಲಿಂದ ಗೆದ್ದು ನಾಡ ದೊರೆಯಾಗಿದ್ದಾರೆ. ಇದೀಗ ಅವರ ಹಾದಿಯನ್ನ ಡಿಕೆ ಶಿವಕುಮಾರ್​ ಅವರು ಕೂಡ ಅನುಸರಿಸಲು ಹೊರಟ್ಟಿದ್ದಾರೆ ಎನ್ನಲಾಗುತ್ತಿದೆ.

Author

error: