ಸ್ಯಾಂಡಲ್ವುಡ್ನ ಮೋಹಕತಾರೆ ಹಾಗೂ ಮಾಜಿ ಸಂಸದೆ ರಮ್ಯಾ ಕೋರ್ಟ್ ಬಳಿ ಕಾಣಿಸಿಕೊಂಡ್ರು. ಇವರು ಈ ಹಿಂದೆಯಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಕೇಸ್ ವಿಚಾರಣೆಗಾಗಿ ನಟಿ ರಮ್ಯಾ ವಾಣಿಜ್ಯ ಕೋರ್ಟ್ ವಿಚಾರಣೆಗೆ ಹಾಜರಾದ್ರು.
ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲೂ ರಮ್ಯಾ ನಟಿಸಿದ್ದರು. ಆದರೆ ಸಿನಿಮಾ ಟ್ರೈಲರ್ ರಿಲೀಸ್ ಆದ ಮೇಲೆ ನಟಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ನಾಗರಹಾವು ಚಿತ್ರದ ನಂತರ ಬರೋಬ್ಬರಿ 7 ವರ್ಷಗಳ ಬಳಿಕ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ವಿವಾದ ಯಾಕೆ?
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಪ್ರೋಮೋ ಶೂಟ್ಗೆ ಮಾತ್ರ ನನ್ನ ಪರ್ಮೀಷನ್ ಇತ್ತು. ನನ್ನ ದೃಶ್ಯಗಳನ್ನು ಪರ್ಮೀಷನ್ ಇಲ್ಲದೆ ಸಿನಿಮಾ ಮತ್ತು ಟ್ರೈಲರ್ನಲ್ಲೂ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ರಿಲೀಸ್ಗೆ ತಡೆ ನೀಡಬೇಕು. ಒಂದು ಕೋಟಿ ಪರಿಹಾರ ಕೊಡಬೇಕು ಎಂದು ನಟಿ ರಮ್ಯಾ ಚಿತ್ರತಂಡದ ವಿರುದ್ಧ ಕೇಸ್ ಹಾಕಿದ್ದರು.
ಸಿನಿಮಾಗಳಿಂದ ದೂರ ಉಳಿದಿದ್ದ ರಮ್ಯಾ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಇವರು ಕಾಮಿಯೋ ಎಂದಾಗ ಸಾಕಷ್ಟು ಸದ್ದು ಮಾಡಿದ್ದರು.
