ಎಲ್ಲರೂ ನಾರ್ಮಲ್ ಆಗಿ ಮದುವೆಗಿನ್ನಾ ಮುಂಚೆ ಆರಾಮಾಗಿ ಸೋಲೋ ಟ್ರಿಪ್ ಅಂತ ಹಿಮಾಲಯ ಕೇದಾರನಾಥ್, ಗೋವಾ, ಮಂಗಳೂರಿಗೆ ಹೀಗೆ ಪ್ರವಾಸಿ ತಾಣಗಳಿಗೆ ಮನೆಯವರಿಗೆ ಸುಳಿವೂ ಕೊಡದೇ ನಿಂತ ಜಾಗದಿಂದಾನೇ ಬಟ್ಟೆ ಬರೇ ತುಂಬಿಕೊಂಡು ಹೊರಟು ಬಿಡುತ್ತಾರೆ. ಆದರೆ, ಮದುವೆಯಾಗಿ ಮಕ್ಕಳಾದ ಮೇಲೂ ಸೋಲೋ ಟ್ರಿಪ್ ಮಾಡಬಹುದಾ ? ಇದು ನಮ್ಮ ಲೈಫ್‌ಗೆ ಎಷ್ಟು ಉಪಯೋಗ ಬನ್ನಿ ಹೇಳ್ತೀನಿ.
ಹೌದು ಮದುವೆ ಆದ ಮೇಲೂ ಸೋಲೋ ಟ್ರಿಪ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತೆ. ಯಾಕೆ ಅಂತಂದ್ರೆ ದಿನಾಲು ಸಂಸಾರದ ಜಂಜಾಟ ಅನ್ನೋ ದೊಡ್ಡ ಸಮುದ್ರದಲ್ಲಿ ಬಿದ್ದು ಒದ್ದಾಡಿರೋರಿಗೆ ಈ ಸೋಲೋ ಟ್ರಿಪ್ ಒಂದು ರೀತಿಯಾದ ಆರಾಮನ್ನು ನೀಡುತ್ತದೆ.
ದಿನಾ ಎದ್ರೆ ತಿಂಡಿ ಮಾಡು, ಕಸ ಗುಡ್ಸು, ಬಟ್ಟೆ ತೊಳಿ, ಮಕ್ಕಳನ್ನ ನೋಡ್ಕೊ ಅನ್ನೋ ತಲೆಬಿಸಿಗಳಿಂದ ಈ ಸೋಲೋ ಟ್ರಿಪ್ ಅಂದರೆ ಒಂದು ಸುತ್ತಾಟ ಒಂದು ತರಹದ ನೆಮ್ಮದಿಯನ್ನು ನೀಡುತ್ತದೆ. ಈ ಸದ್ಯ ಮದುವೆಯಾಗಿ ಮಕ್ಕಳಿರೋ ಎಲ್ಲರಿಗೂ ಅನ್ಸತ್ತೆ, ಯಾಕಪ್ಪಾ ಬೇಕಿತ್ತು ಈ ಮದ್ವೆ ಮಕ್ಕಳು ಸಂಸಾರ ಎಲ್ಲಾ ಸನ್ಯಾಸಿ ಆಗಿದ್ರೆ ಸುಖವಾಗಿ ಇರುತ್ತಿದ್ದೆ ಅಂತ ಫ್ರೆಂಡ್ಸ್ ಜೊತೆ ಒಟ್ಟಿಗೆ ಸೇರ್ದಾಗ ನಾವೇ ಹೇಳ್ತಿರುತ್ತೇವೆ.
ಹಾಗಾಗಿ ಈ ಸೋಲೋ ಟ್ರಿಪ್ ಅಂದರೆ ಒಂಟಿ ಸುತ್ತಾಟ ಈ ಎಲ್ಲಾ ಮಾತುಗಳಿಗೆ ಬ್ರೆಕ್ ಹಾಕೋ ಕೆಲಸ ಮಾಡುತ್ತೆ. ಇದಕ್ಕೆ ನಾವ್ ಮಾಡ್ಬೇಕಾಗಿರೋದು ಇಷ್ಟೇ ಮನೆಯವರ ಮನಸ್ಸನ್ನ ಸ್ವಲ್ಪ ಒಪ್ಪಿಸಿ ಮಕ್ಕಳ ಜವಾಬ್ದಾರಿಯನ್ನ ಮನೆಯವರ ಪಾಲಿಗೆ ಒಪ್ಸಿ ಆಫೀಸಿಗೆ ರಜೆ ತಗೊಂಡು ಬ್ಯಾಗ್ ಎತ್ತುಕೊಂಡು ಹೋಗ್ತಾ ಇರೋದೆ. ಆದ್ರೆ ಇಲ್ಲೂ ಸಹ ಒಂದು ಪ್ರಶ್ನೆ ಬರುತ್ತೆ ಈ ವಯಸ್ಸಲ್ಲಿ ಸೋಲೋ ಟ್ರಿಪ್ ಎಲ್ಲಾ ಬೇಕಾ ಈವಾಗ ಮಕ್ಕಳು ಸಂಸಾರ ಬಿಟ್ಟು ಹೋದ್ರೆ ಜನ ಏನ್ ಅನ್ಕೊಳಲ್ಲ ಯಾಕ್ ಬೇಕಿತ್ತು ಈ ಟ್ರಿಪ್ ಎಲ್ಲಾ ಸುಮ್ನೆ ಮನೇಲಿ ಇರೋಕೆ ಆಗಿಲ್ವಾ. ಇರೋ ಪಾತ್ರೆ ತೊಳ್ಕೊಂಡು ಮಕ್ಕಳನ್ನ ನೋಡ್ಕೊಂಡು ಬೇಕಿತ್ತಾ ಫಜೀತಿ ಅಂತ ಅಕ್ಕ ಪಕ್ಕದ ಮನೆಯವರು ಮಾತಡ್ಕೊತಾರೇ ಅಂತ ಯೋಚನೆ ಅಂತೂ ಬಂದೇ ಬರುತ್ತೆ.

ಆದ್ರೆ ಈ ಸೋಲೋ ಟ್ರಿಪ್ ನಿಮಗೋಸ್ಕರಾ, ನಿಮ್ಮ ಮಾನಸಿಕ ಆರೋಗ್ಯಕ್ಕೆ, ನೀವು ಹೊಂದಿರುವ ಸಂಬಧಗಳ ಅತ್ಯುತ್ತಮ ನಿರ್ವಹಣೆಗೋಸ್ಕರ ಮತ್ತು ಬದುಕಿನ ಬದಲಾವಣೆಗೋಸ್ಕರ. ಏಕಾಂಗಿಯಾಗಿ ಪ್ರಯಾಣ ಮಾಡೋದ್ರಿಂದ ಮಾನಸಿಕ ಆರೋಗ್ಯನಾ ಸುಧಾರಿಸುತ್ತಾ?
ಖಂಡಿತಾ ಹೌದು ಸೋಲೋ ಟ್ರಿಪ್ ಮಾನಸಿಕ ಆರೋಗ್ಯಕ್ಕೆ ಮದ್ದಿನ ರೀತಿ ಕೆಲಸ ಮಾಡುತ್ತೆ, ಅಂದೇ ಎಲ್ಲಾ ಸಂಸಾರದ ಜಂಜಾಟಗಳಿಂದ ಕಳೆದು ಹೋದ ಮಾನಸಿಕ ಆರೋಗ್ಯವನ್ನ ಹಿಡಿತಕ್ಕೆ ತರೋದಕ್ಕೆ ಒಬ್ಬಂಟಿಯಾಗಿ ಹೊಸ ಹೊಸ ಜಾಗಗಳನ್ನು ನೋಡಿ ಹೊಸ ಹೊಸ ಅನುಭವಗಳನ್ನು ತಗೊಂಡು, ಎಲ್ಲಾ ಟೆಂಕ್ಷನ್ ದೂರ ಮಾಡೋದ್ರಿಂದಾ ಈ ಸೋಲೋ ಟ್ರಿಪ್ ಬಹಳ ಮುಖ್ಯವಾಗುತ್ತೆ. ದಿನಾ ಅದೇ ಸಂಸಾರ ಅನ್ನೋ ಜೇಡರ ಬಲೇಲಿ ಸಿಕ್ಕಿ ಒದ್ದಾಡೋಕ್ಕಿಂತ ಸ್ವಲ್ಪ ಅದ್ರಿಂದ ಆಚೆ ಬಂದು ಚಿಲ್ ಮಾಡೋದು ಬೆಸ್ಟ್ ಅಲ್ವಾ…
ವೀಕೆಂಡ್ ಬಂತೂ ಅಂದ್ರೆ ರಜೆ ಹಾಕಿ ಎಲ್ಲರ ಜೊತೆ ಟ್ರಿಪ್ ಹೋಗಬಹುದಲ್ಲಾ ಅನ್ನೋರ ಮದ್ಯೆ ಈ ಸೋಲೋ ಟ್ರಿಪ್ ನಮಗೋಸ್ಕರ ನಾವೇನು ಅಂತಾ ತಿಳ್ಕೊಳೊದ್ದಕ್ಕೆ ಈ ಒಂದು ಟ್ರಿಪ್ ಅನ್ನ ಜೀವನದಲ್ಲಿ ಮಾಡಲೇಬೇಕು.
ಸಂಸಾರ ಸಾಗಿಸುವುದರಲ್ಲಿ ಎಲ್ಲೋ ಒಂದು ಕಡೆ ಕಳೆದು ಹೋದ ನಾವು ನಮ್ಮನ್ನೇ ಮರೆತು ಮತ್ತೊಬ್ಬರ ಅವಶ್ಯಕತೆ, ಜವಾಬ್ದಾರಿಯನ್ನು ನೋಡುವುದರಲ್ಲಿ ನಮಗೆ ಏನುಬೇಕು, ಎಷ್ಟು ಸಮಯ ಕೊಡಬೇಕು ಅನ್ನೋದನ್ನೇ ಮರೆತು ಮುಂದೆ ಹೋಗುರ್ತಿವಿ. ಆದ್ರೆ ಈ ಪ್ರವಾಸ ನಾವೇನು ಅನ್ನೋದನ್ನ ನೆನಪು ಮಾಡಿಕೊಡುವುದಲ್ಲದೇ ನಮ್ಮಲ್ಲಿ ನಮ್ಮನ್ನ ಕಂಡುಕೊಳ್ಳೋಕೆ ಸಹಾಯ ಮಾಡುತ್ತದೆ.
ಆತ್ಮ ವಿಶ್ವಾಸ ಮತ್ತು ಸ್ವಾತಂತ್ರಕ್ಕೆ ದಾರಿದೀಪದಂತೆ ಕಾರ್ಯ
ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳಲು ಈ ಒಂಟಿ ಪ್ರಯಾಣ ತುಂಬಾ ಸಹಾಯಕವಾಗುತ್ತದೆ. ಅಂದರೆ ದಿನಾಲು ಟೆಂಕ್ಷನ್ ಎಂಬ ಸಾವಿರಾರು ಯೋಚನೆಗಳಲ್ಲಿ ಒದ್ದಾಡುತ್ತಿರೋ ಜೀವಕ್ಕೆ ಈ ಒಂಟಿ ಪ್ರಯಾಣ ವಿಮೋಚನೆ ನೀಡಿ ನಮ್ಮ ಆತ್ಮವಿಶ್ವಾಸವನ್ನ ಅಧಿಕಗೊಳಿಸುವಲ್ಲಿ ಹಾಗೇ ಸ್ವಾತಂತ್ರವಾಗಿ ನಮಗಿಷ್ಟ ಬಂದಂತೆ ತಿರುಗಾಡಲು ಇದು ಸಹಾಯಕವಾಗಿದೆ. ಜೊತೆಗೆ ಇದು ಸಖತ್ ಖುಷಿ ಮತ್ತೆ ಚಿಲ್ ಮೈಂಡ್ ಸೆಟ್ ಅನ್ನು ನೀಡುತ್ತದೆ.

ಇದಲ್ಲದೇ ತುರ್ತು ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯಕವಾಗಿದೆ. ಈ ರೀತಿಯ ಒಂಟಿ ಪ್ರಯಾಣಗಳಿಂದ ಕಲಿತುಕೊಳ್ಳುವ ಇನ್ನೊಂದು ಮುಖ್ಯವಾದ ಅಂಶವೆಂದರೆ ಕೆಲವು ಕಷ್ಟದ ತುರ್ತು ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸಲು ಈ ಸೋಲೋ ಟ್ರಿಪ್ ಸಹಾಯ ಮಾಡುತ್ತದೆ. ಅಂದರೆ ಕಷ್ಟದ ಸಮಯದಲ್ಲೂ ಧೈರ್ಯವಾಗಿ ಯಾರ ಸಹಾಯವನ್ನೂ ಪಡೆಯದೇ ತಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯಕವಾಗಿದೆ. ಆದ್ದರಿಂದ ಒಂಟಿ ಪ್ರಯಾಣ ಕೈಗೊಳ್ಳುವುದು ತುಂಬಾ ಒಳಿತು.
ಸೋಲೋ ಟ್ರಿಪ್‌ನಿಂದ ಆಗುವ ಲಾಭಗಳೇನು…?
ನಮ್ಮ ಪ್ರೀತಿ ಪಾತ್ರರನ್ನು ಹೆಚ್ಚುಗೊಳಿಸುತ್ತದೆ – ಅಂದರೆ ಒಂದು ಸಣ್ಣ ಗೆಳೆಯರ ಗುಂಪನ್ನು ಹೊಂದುವುದಕ್ಕಿಂತ ಹೆಚ್ಚು ಜನರ ಗೆಳೆತನ ನಮಗೆ ಸಿಗುತ್ತಾ ಹೋಗುತ್ತದೆ. ಆತ್ಮವಿಶ್ವಾಸ ಅಧಿಕಗೊಳಿಸುತ್ತದೆ ಅಂದರೆ ಎಲ್ಲಿಯಾದರೂ ಧೈರ್ಯವಾಗಿ ನಿಂತು ಹೆಚ್ಚಿನ ಕಾನ್ಫಿಡೆನ್ಸ್ನಿಂದ ವರ್ತಿಸಬಹುದು. ಎಲ್ಲಿಯಾದರು ಪ್ರಶ್ನೆ ಕೇಳುವ, ತನ್ನ ಹಕ್ಕನ್ನು ತಾನು ಚಲಾಯಿಸುವ ಹಾಗೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸವನ್ನು ವೃದ್ಧಿಸಲು ಸಹಾಯವಾಗಿದೆ.
ಭಾಷಾ ಕೌಶಲ್ಯಗಳನ್ನು ಅಧಿಕಗೊಳಿಸುತ್ತದೆ – ಪ್ರವಾಸ ಕೈಗೊಂಡಾಗ ಸ್ಥಳೀಯ ಜನರು ಮತ್ತು ಭಾಷೆಯನ್ನ ಅರಿಯಬಹುದಾಗಿದೆ. ನಮ್ಮ ಜೊತೆಗಿನ ಖುಷಿ – ಅಂದರೆ ಒಂಟಿಯಾಗಿದ್ದುಕೊಂಡೆ ಖುಷಿಯಾಗಿ ಇರಬಹುದಾಗಿದೆ. ಹಾಗಾಗಿ ಒಂಟಿಯಾಗಿ ಟ್ರಿಪ್ ಮಾಡೋ ಚಾನ್ಸ್ ಸಿಕ್ರೆ ಯಾವತ್ತೂ ಮಿಸ್ ಮಾಡ್ಬೇಡಿ. ಬ್ಯಾಗ್ ತುಂಬ್ಕೊಂಡು ಓಡುತ್ತಾ ಇರಿ….
