MI vs KKR : ವಾಂಖೆಡೆಯಲ್ಲಿ ಮುಂಬೈಗೆ ಚೆಳ್ಳೆ ಹಣ್ಣು ತಿನ್ನಿಸಿದ ಕೆಕೆಆರ್

MI vs KKR Match Highlights: ಕೆಕೆಆರ್ 12 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿತು.

ಮುಂಬೈ : ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್‌‌ ರೈಡರ್ಸ್ 24 ರನ್​ ಗಳಿಂದ ಗೆಲುವು ಪಡೆಯಿತು. ಈ ಮೂಲಕ ಕೆಕೆಆರ್ 12 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಭರ್ಜರಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ 19.5 ಓವರ್‌ಗೆ 10 ವಿಕೆಟ್ ಕಳೆದುಕೊಂಡು 169 ರನ್‌ ಗಳಿಸಿತು.

ಗೆಲುವಿಗೆ 170 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ತಂಡ, 18,5 ಓವರ್‌ಗೆ 145 ರನ್‌ ಗಳಿಗೆ ಆಲೌಟ್ ಆಗುವ ಮೂಲಕ ಕೆಕೆಆರ್ ವಿರುದ್ಧ 24 ರನ್‌ ಗಳಿಂದ ಸೋಲು ಅನುಭವಿಸಿತು. ಈ ಮೂಲಕ ಮುಂಬೈ ಬಹುತೇಕ ಪ್ಲೇಆಫ್‌ ರೇಸ್‌‌ನಿಂದ ಹೊರಬಿದ್ದಂತೆ. ಇದು ಪಾಂಡ್ಯ ನೇತೃತ್ವದ ಮುಂಬೈಗೆ ಹಾಲಿ ಆವೃತ್ತಿಯ ಎದುರಾದ ಸತತ ನಾಲ್ಕನೇ ಹಾಗೂ ಒಟ್ಟು ಎಂಟನೇ ಸೋಲು,

ಮುಂಬೈ ಇಂಡಿಯನ್ಸ್ ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಕೆಕೆಆರ್ 14 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

Author

error: