ನವದೆಹಲಿ : ಗೋದ್ರೇಜ್ ಉದ್ಯಮ ಸಮೂಹ ಎರಡಾಗಿ ಒಡೆದಿದೆ. ಗೋದ್ರೆಜ್ ಕುಟುಂಬದ ಎರಡು ಶಾಖೆಗಳು ಬೇರೆಯಾಗಿವೆ.
ಈ ಪುನರ್ ವಿಂಗಡನೆಯ ನಂತರ ಗೋದ್ರೇಜ್ ಎಂಟರ್ ಪ್ರೈಸೆಸ್ ಸಮೂಹ 75 ವರ್ಷದ ಜೇಮ್ಶಿದ್ ಗೋದ್ರೇಜ್ ಅವರ ಒಡತನದಲ್ಲಿ ನಡೆಯಲಿದೆ, ಇವರೆ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವರು.
ಗೋದ್ರೇಜ್ ಇಂಡಸ್ಟ್ರೀಸ್ ಸಮೂಹದ ಅಧ್ಯಕ್ಷರಾಗಿ 73 ವರ್ಷದ ನಾದೀರ್ ಗೋದ್ರೇಜ್ ಅವರು ಕಾರ್ಯನಿರ್ವಹಿಸುವರು.
ಗೋದ್ರೇಜ್ ಕುಟುಂಬ ತಾವು ಬೇರೆಯಾದ ವಿಚಾರವನ್ನು ಪ್ರಕಟಿಸಿದೆ. ಹೀಗೆ ಬೇರೆಯಾಗಿರುವದಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಒಪ್ಪಿಗೆಯನ್ನು ಪಡೆಯಬೇಕಾಗಿದೆ. ಗೋದ್ರೇಜ್ ಬ್ರಾಂಡ್ ಗೆ ಸಂಬಂಧಿಸಿದಂತೆ ಒಪ್ಪಿಗೆ ಬರಬೇಕಾಗಿದೆ.






