ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರವನ್ನು ಇಟಲಿಯ ವೆನಿಸ್ ನಗರವನ್ನಾಗಿ ಮಾಡಿ. ಅಲ್ಲಿಯೂ ಜನ ದೋಣಿಗಳಲ್ಲಿಯೇ ಸಂಚಾರ ಮಾಡಬೇಕು. ಇಲ್ಲಿಯೂ ಅದೇ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿರುವ ಬಗ್ಗೆ ಮಾಧ್ಯಮಗಳ ಪ್ರಶೆಗೆ ಉತ್ತರಿಸಿದ ಅವರು, ಬೆಂಗಳೂರು ಸಂಪೂರ್ಣವಾಗಿ ಹಲವಾರು ಪ್ರದೇಶಗಳು ಜಾಲವೃತವಾಗಿದೆ. ಜನರು ಹೊಟೆಲ್ ಗಳಲ್ಲಿ ಜೀವನ ಮಾಡುತ್ತಿದ್ದಾರೆ. ರೈತರು ಬೆಳೆದಿರುವ ಬೆಳೆ ನಾಶವಾಗಿದೆ. ಹಿಂದೆ ಸಿಂಗಾಪುರ ಮಾಡಿದ್ದು ನೋಡಿದ್ದೆವು. ಈಗ ಬ್ರ್ಯಾಂಡ್ ಬೆಂಗಳೂರನ್ನು ವೆನಿಸ್ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಮಳೆಗೆ ಎರಡು ಜೀವ ಹೋಗಿವೆ. ಕೆಂಗೇರಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ದುರಂತಕ್ಕೆ ಹೊಣೆ ಯಾರು? ಸರಕಾರಕ್ಕೆ ರಾಜಕೀಯದ ಚಿಂತೆ. ಜನರು ಇನ್ನಿಲ್ಲದ ನರಕ ನೋಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.







