ನವದೆಹಲಿ : ಭಾರತದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಚೀನಾ ಇಲ್ಲಿನ 30 ವಿವಿಧ ಪ್ರದೇಶಗಳಿಗೆ ಚೀನಿ ಹೆಸರಿನ ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೇ 1 ರಿಂದ ಈ ಹೊಸ ಹೆಸರುಗಳು ಜಾರಿಗೆ ಬರಲಿವೆ ಎಂದು ಹೇಳಿದೆ. ಚೀನಾದ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಂಸ್ ಈ ಕುರಿತ ವರದಿಯನ್ನು ಪ್ರಕಟಿಸಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚೀನಾ ತಕರಾರು ಎತ್ತುತ್ತಲೇ ಬಂದಿದೆ. ಇದಕ್ಕೆ ಮೊದಲಿನಿಂದಲೂ ಪ್ರತಿಕ್ರಿಯೆ ನೀಡುತ್ತಲೇ ಬಂದ ಭಾರತ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟ ಪಡಿಸುತ್ತಲೇ ಬಂದಿದೆ. ಆದರೆ ಚೀನಾ ತನ್ನ ತರಲೆಯನ್ನು ನಿಲ್ಲಿಸಿಲ್ಲ.
ಭಾರತದ ಗಡಿ ಪ್ರದೇಶದಲ್ಲಿ ಚೀನಾ ಉದ್ರಿಕ್ತ ಪರಿಸ್ಥಿತಿಗೆ ಕಾರಣವಾಗಿದೆ.

ಭಾರತದ ಕೆಲವು ಪ್ರದೇಶಗಳನ್ನು ಕಬಳಿಸಿ ಅಲ್ಲಿ ಹಳ್ಳಿಗಳ ನಿರ್ಮಾಣ ಮಾಡುತ್ತಿದೆ ಎಂಬ ಆರೋಪವಿದೆ. ಈ ಕುರಿತ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದೆ. ಆದರೆ ಭಾರತ ಸರ್ಕಾರ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ವಿದೇಶಾಂಗ ಸಚಿವರಾಗಲಿ ಈ ಕುರಿತ ಪ್ರತಿ ಪಕ್ಷಗಳ ಆರೋಪಕ್ಕೂ ಉತ್ತರ ನೀಡಿಲ್ಲ.

Author

Leave a Reply

Your email address will not be published. Required fields are marked *