ನವದೆಹಲಿ : ಚೀನಾ ಭಾರತದ ಭೂ ಪ್ರದೇಶದ ಒಳಗೆ ಪ್ರವೇಶಿಸಿ ನಮ್ಮ ಪ್ರದೇಶವನ್ನು ಕಬಳಿಸಿದೆ. ಈ ಸಂದರ್ಭದಲ್ಲಿ ತಾವು ಏನು ಮಾಡುತ್ತಿದ್ದಿರಿ. ನಿದ್ರೆ ಮಾತ್ರೆ ಅಥವಾ ಮಾದಕ ವಸ್ತು ತೆಗೆದುಕೊಂಡು ನಿದ್ರೆ ಮಾಡುತ್ತಿದ್ರಾ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಭಾರತದ ಅರುಣಾಚಲ ಪ್ರದೇಶದ ಕೆಲ ಭಾಗಗಳಿಗೆ ಚೀನಾ ಮರು ನಾಮಕರಣ ಮಾಡಿದ ಬೆನ್ನಲ್ಲೆ ಕಾಂಗ್ರೆಸ್ ಅಧ್ಯಕ್ಷರು ಈ ಪ್ರಶ್ನೆ ಕೇಳಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ವಾಕ್ ಪ್ರಹಾರ ನಡೆಸಿದ ಅವರು ಚೀನಾದ ಇಂತಹ ಕೃತ್ಯದ ಬಗ್ಗೆ ಮೌನವಾಗಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ತಮಗೆ 56 ಇಂಚು ಎದೆ ಇದೆ ಎಂದು ಮೋದಿ ಹೇಳುತ್ತಾರೆ. ನಾನು ಯಾರಿಗೂ ಯಾವುದಕ್ಕೂ ಹೆದರುವುದಿಲ್ಲ ಎನ್ನುತ್ತಾರೆ, ನಿಮಗೆ ನಿಜವಾದ ಧೈರ್ಯ ಇದ್ದಿದ್ದರೆ ತಾವು ಭಾರತದ ಭೂಭಾಗವನ್ನು ಚೀನಾಕ್ಕೆ ಯಾಕೆ ಬಿಟ್ತು ಕೊಟ್ಟಿರಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಕ್ ಪ್ರಹಾರ ನಡೆಸಿದರು

Author

Leave a Reply

Your email address will not be published. Required fields are marked *