ಅಮ್ಮಂದಿರ ದಿನ.. ಅಮ್ಮನನ್ನು ನೆನಪು ಮಾಡಿಕೊಳ್ಳುವ ದಿನ ಎಂಬ ಪ್ರತೀತಿ. ಅದಕ್ಕಾಗಿ ಎಂದೂ ಅಮ್ಮನನ್ನು ನೆನಪು ಮಾಡಿಕೊಳ್ಳದವರು ಈ ದಿನ ಮಾತ್ರ ಅಮ್ಮನನ್ನು ನೆನಪು ಮಾಡಿಕೊಳ್ಳಲು ಮರೆಯುವುದಿಲ್ಲ.

ಬೆಳಿಗ್ಗೆ ಎದ್ದವರೇ ಅಮ್ಮನ ಫೋಟೊ ಹಾಕಿ ಸಂತೋಷ ಪಡುತ್ತಾರೆ. ಅಮ್ಮನನ್ನು ಅಪ್ಪನನ್ನು ವೃದ್ಧಾಶ್ರಮದಲ್ಲಿ ಬಿಟ್ಟವರು ಸಿಹಿ ತೆಗೆದುಕೊಂಡು ವೃದ್ಧಾಶ್ರಮಕ್ಕೆ ಹೋಗಿ ಮಾತನಾಡಿಸಿ ಬಂದು ಬಿಡುತ್ತಾರೆ, ಅಲ್ಲಿಗೆ ಅವರ ಜವಾಬ್ದಾರಿನೂ ಮುಗೀತು. ಪ್ರೀತಿನೂ ಮುಗಿತು.

ಉಳಿದ ದಿನಗಳಂದು ಅಮ್ಮನ ನೆನಪು ಇರುವ ಸಂಭವ ಕಡಿಮೆ. ಆದರೆ ಭಾರತೀಯ ಪರಂಪರೆಯಲ್ಲಿ ಹಾಗಲ್ಲ. ವಾನಪ್ರಸ್ತಾಶ್ರಮ ಅನ್ನೋದು ಈಗಿಲ್ಲ. ಈಗೇನಿದ್ದರೂ ಅಪ್ಪ ಅಮ್ಮನನ್ನು ಜೊತೆಯಲ್ಲಿ ಇರಿಸಿಕೊಂಡು ಅವರ ಕೊನೆಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದು. ಆದರೆ ಕುಟುಂಬ ಅನ್ನೋದು ವಿಘಟನೆ ಆಗಿರುವಾಗ ಎಲ್ಲರೂ ಪ್ರತ್ಯೇಕವೇ. ಹೋಗಲಿ ಸಿನಿಮಾ ನಟ ನಟಿಯರು ಮಾತ್ರ ಇಂತಹ ವಿಶೇಷ ದಿನವನ್ನು ಮರೆಯೋದಿಲ್ಲ. ಒಂದು ಫೋಟೋ ತೆಗೆದು ಹಾಕಲೇ ಬೇಕು.

ಇಲ್ಲಿ ನೋಡಿ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ತಮ್ಮ ಅಮ್ಮಂದಿರನ್ನು ಭೇಟಿ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಅಮ್ಮಂದಿರನ್ನು ನೆನಪು ಮಾಡಿಕೊಂಡಿದ್ದಾರೆ .ಇನ್ನು ಒಂದು ವರ್ಷ ಯಾವ ತೊಂದರೆಯೂ ಇಲ್ಲ.. ಮುಂದಿನ ವರ್ಷ ಇನ್ನೊಂದು ಫೋಟೊ ಹಾಕಿದರೆ ಆಯಿತು.

Author

Leave a Reply

Your email address will not be published. Required fields are marked *