Rain in Old Mysore : ಮೈಸೂರು ಭಾಗದಲ್ಲಿ ನಿನ್ನೆ ಭಾರಿ ಮಳೆ, ಮೈಸೂರು ಚಾಮರಾಜನಗರ ಮತ್ತು ಮಡಿಕೇರಿಯಲ್ಲಿ ವರುಣ ನರ್ತನ

Hevya Rain in Old Mysore ; ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾದ ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ.

ಬೆಂಗಳೂರು : ಬೇಸಿಗೆ ಬಿಸಿಲಿನಲ್ಲಿ ತತ್ತರಿಸಿರುವ ಜನರಿಗೆ ಈಗ ತಂಪು ತಂಪು. ಕೂಲ್ ಕೂಲ್. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದೆ. ಬಿಸಿಲಿನ ಝಳ ಕಡಿಮೆಯಾಗುತ್ತಿದೆ.

ಮೈಸೂರು ವಿಭಾಗದ ಚಾಮರಾಜನಗರ, ಮಡಿಕೇರಿಯಲ್ಲೂ ನಿನ್ನೆ ಮಳೆಯಾಗಿದೆ. ಮಳೆಯ ಜೊತೆ ಅಲೇಕಲ್ಲು ಸಹಿತಿ ಗುಡುಗು ಸಿಡಿಲು, ಮಡಿಕೇರಿ ಸಮೀಪದ ಕೆದಕಲ್ ಮತ್ತು ನಾಪೊಕ್ಲುವಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು ಎಂದು ವರದಿ ತಿಳಿಸಿದೆ.

ಮಡಿಕೇರಿಯಲ್ಲಿ ಸಾಧಾರಣ ಮಳೆಯಾಗಿದೆ. ಗುಡುಗು ಸಿಡಿಲು ಜೋರಗಿಯೇ ಇತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾದ ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ. ಆಟೋ ಮತ್ತು ಕಾರಿನ ಮೇಲೆ ಮರ ಬಿದ್ದು ಜಖಂ ಆದ ವರದಿಯಾಗಿದೆ.

ಕಲ್ಯಾಣ ಕರ್ನಾಟಕದ ಬೀದರ್ ನಲ್ಲು ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Author

error: