Bengaluru Rain: ಅಂತೂ ಇಂತೂ ಬೆಂಗಳೂರಿನಲ್ಲಿ ಮಳೆ ಬಂತು…!

Bengaluru Rain: ಇದೀಗ 159 ದಿನಗಳ ಅಂತರದ ನಂತರ ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಯಿತು.

ಬೆಂಗಳೂರು : ಕಳೆದ 123 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಒಣಹವೆ ಉಂಟಾಗಿತ್ತು. ಅಂತೂ ಇದೀಗ 159 ದಿನಗಳ ಅಂತರದ ನಂತರ ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಯಿತು.

ಗುರುವಾರ ಸಂಜೆ ಸುರಿದ ಸಾಧಾರಣ ಮಳೆಯಿಂದ ಬೆಂಗಳೂರಿನ ನಿವಾಸಿಗಳಿಗೆ ಬಿಸಿಲಿನ ಝಳದಿಂದ ಕೊಂಚ ರಿಲೀಫ್ .

ಭಾರತೀಯ ಹವಾಮಾನ ಪ್ರಕಾರ, 1901 ರ ನಂತರ, ನಗರದಲ್ಲಿ ಏಪ್ರಿಲ್‌ನಲ್ಲಿ ಮಳೆಯಿಲ್ಲದಿರುವುದು ಇದೇ ಮೊದಲು. ಗುರುವಾರ ಸಂಜೆ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿರುವ ವರದಿಯಾಯಿತು..

ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ನಗರದ ಕೆಲವೆಡೆ ಮಳೆಯಾಗಲಿದೆ. ಆದರೆ, ಐದು ದಿನಗಳ ನಂತರ ಗುಡುಗು ಸಹಿತ ಮಳೆಯಾಗಲಿದೆ. ಕ್ಲುಮಿನೊ-ನಿಂಬಸ್ ಮೋಡಗಳ ರಚನೆ ಮತ್ತು ಗುಡುಗು ಸಹಿತ ಮಳೆಯು ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ಸಂಭವಿಸುತ್ತದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಕೊಂಚ ವಿರಾಮ ಸಿಕ್ಕಿದ್ದರೆ, ಉತ್ತರ ಒಳನಾಡಿನಲ್ಲಿ ತಾಪಮಾನ ಮುಂದುವರಿಯಲಿದೆ .

Author

error: