ನವದೆಹಲಿ : ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬೆನ್ನು ಬಿದ್ದಿದೆ. ನೋಟೀಸು ಮೇಲೆ ನೋಟಿಸು ನೀಡುತ್ತಿದೆ. ಆದರೆ ಕೇಜ್ರೀವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲ.
ಇದರಿಂದ ಬೇಸತ್ತ ಕೇಜ್ರೀವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಇಡಿಗೆ ನೋಟೀಸು ನೀಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22 ಕ್ಕೆ ಮುಂದೂಡಿದೆ.
