ಚೆನ್ನೈಗೆ ತವರಿನಲ್ಲೇ ಸೋಲು.
ಪ್ಳೇ ಆಪ್ ಗಾಗಿ ಪಂಜಾಬ್ ಹೋರಾಟ
ದೋನಿ ಕನೆಯ ಬಾಲ್ ನಲ್ಲಿ ರನ್ ಔಟ್
ಅಂದ ಕಾಲತ್ತಿಲ್ಲ.. ಪಂಜಾಬ್ ಅಂಡರ್ ರೇಟೇಡ್ ತಂಡ. ಆದರೆ ಈ ಬಾರಿ ಪವಾಡ ನಡೆಯುತ್ತಿದೆ. ಕೆಳಗೆ ಬಿದ್ದವರು ಮೇಲೇಳುತ್ತಿದ್ದಾರೆ. ಮೇಲಿದ್ದವರು ಕೆಳಕ್ಕೆ ಬೀಳುತ್ತಿದ್ದಾರೆ. ನಿನ್ನೆ ಆಗಿದ್ದು ಅದೇ.. ಚೆನ್ನೈ ಸೂಪರ್ ಕಿಂಗ್ಸ್ ನೆಲ ಕಚ್ಚಿತು. ಪಂಜಾಬ್ ಜಯಬೇರಿ ಭಾರಿಸಿತು. ಇದು ಅನಿರೀಕ್ಷಿತ ಫಲಿತಾಂಶ,
ನಿನ್ನೆ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿತು. ಚೆನ್ನೈನ ತವರಿನಲ್ಲೇ 7 ವಿಕೆಟ್ಗಳಿಂದ ಸೋಲಿಸಿದ್ದು ವಿಶೇಷ. ಈ ಗೆಲುವಿನೊಂದಿಗೆ ಪಂಜಾಬ್ ನ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ.
ಚೆಪಾಕ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ 20 ಓವರ್ಗಳಲ್ಲಿ 7 ವಿಕೆಟ್ಗೆ 162 ರನ್ ಪೇರಿಸಿತ್ತು. ಈ ಮೊತ್ತ ಕಡಿಮೆಯೇ ಎಂದು ಮೊದಲಿನಿಂದಲೇ ಅನ್ನಿಸಿತ್ತು. ಕೊನೆಗೆ ಆದದ್ದು ಅದೇ.
ರುತುರಾಜ್ ಗಾಯಕ್ವಾಡ್ 62 ರನ್ ಹಾಗೂ ಅಜಿಂಕ್ಯ ರಹಾನೆ 29 ರನ್ ಗಳಿಸಿದರು. ಪಂಜಾಬ್ ಪರ ಹರ್ಪ್ರೀತ್ ಬ್ರಾರ್ ಮತ್ತು ರಾಹುಲ್ ಚಹಾರ್ 2-2 ವಿಕೆಟ್ ಪಡೆದರು. ಕಗಿಸೊ ರಬಾಡ ಮತ್ತು ಅರ್ಷದೀಪ್ ಸಿಂಗ್ 1-1 ವಿಕೆಟ್ ಪಡೆದರು. ಕೊನೆಯ ಎಸೆತದಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗಿದರು. ಅಲ್ಲಿಗೆ ಚೆನ್ನೈ ಇನ್ನಿಂಗ್ಸ್ ಮುಕ್ತಾಯವಾಯಿತು,
ಚೆನ್ನೈ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್ ನ ಆರಂಭ ಸರಿ ಇರಲಿಲ್ಲ. ಪ್ರಭಾಸಿಮ್ರಾನ್ 13 ರನ್ ಗಳಿಸಿ ಔಟಾದರು. ಇದರ ನಂತರ ರಿಲೆ ರೂಸೋ ಮತ್ತು ಜಾನಿ ಬೈರ್ಸ್ಟೋವ್ ಉತ್ತಮ ಜೊತೆಯಾಟವಾಡಿದರು. ಇಬ್ಬರೂ ಎಚ್ಚರಿಕೆಯ ಆಟವಾಡಿ ತಂಡವನ್ನು 100ರ ಸಮೀಪಕ್ಕೆ ಕೊಂಡೊಯ್ದರು. ಬೈರ್ಸ್ಟೋವ್ 46 ರನ್ ಮತ್ತು ರಿಲೆ ರೂಸೋ 43 ರನ್ ಗಳಿಸಿ ಔಟಾದರು.
ಇದಾದ ಬಳಿಕ ನಾಯಕ ಸ್ಯಾಮ್ ಕುರ್ರಾನ್ ಅಜೇಯ 26 ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳ ನೆರವಿನಿಂದ ಪಂಜಾಬ್ 17.5 ಓವರ್ಗಳಲ್ಲಿ 163 ರನ್ ಗಳಿಸುವ ಮೂಲಕ ಪಂಜಾಬ್ ಗೆಲುವಿಗೆ ಕಾರಣರಾದರು. ಚೆನ್ನೈ ತಂಡದ ಮೂವರು ಬೌಲರ್ಗಳು ತಲಾ ಒಂದು ವಿಕೆಟ್ ಪಡೆದರು.
