ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.
ಗುಜರಾತ್ ಟೈಟನ್ಸ್ ನೀಡಿದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 19.5 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ 3 ವಿಕೆಟ್ ಗಳ ಅಂತರದ ರೋಚಕ ಜಯ ದಾಖಲಿಸಿತು.
ಇದು ಅನಿರೀಕ್ಷಿತ. ಪ್ರಬಲ ಗುಜರಾತ್ ತಂಡವನ್ನು ಅಹಮದಾಬಾದ್ ನಲ್ಲೇ ಸೋಲಿಸುವುದು ಸುಲಭವಾಗಿರಲಿಲ್ಲ. ಆದರೆ ಪಂಜಾಬ್ ತಂಡ 200 ರನ್ ಗುರಿ ತಲುಪಿ ಜಯವನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ 89 ರನ್ ಭಾರಿಸಿದರು. ಸಾಯಿ ಸುದರ್ಶನ್ 33 ರನ್ ಹೊಡೆದರು. ಸಮಯೋಚಿತ ಬ್ಯಾಟಿಂಗ್ ನ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 199ರನ್ ಕಲೆಹಾಕಿತು. ಆ ಮೂಲಕ ಪಂಜಾಬ್ ಗೆ ಗೆಲ್ಲಲು 200 ರನ್ ಗಳ ಬೃಹತ್ ಗುರಿ ನೀಡಿತು. ಈ ಮೊತ್ತ ಕಡಿಮೆ ಮೊತ್ತವೇನೂ ಆಗಿರಲಿಲ್ಲ. ಆದರೆ ಗುಜರಾತ್ ಲಕ್ ಸರಿಯಿರಲಿಲ್ಲ.
ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ .ನಾಯಕ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಆಟಗಾರ ಜಾನಿ ಬೇರ್ ಸ್ಟೋ 22 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಆಘಾತದಿಂದ ಪಂಜಾಬ್ ತಂಡ ಚೇತರಿಸಿಕೊಂಡಿತು..
ಈ ಹಂತದಲ್ಲಿ ಸ್ಯಾಮ್ ಕರ್ರನ್ 5 ರನ್ ಗಳಿಸಿ ಪೆವಿಲಿಯನ್ ಗೆ ತೆರಳಿದರು., ಸಿಖಂದರ್ ರಾಜಾ 15 ರನ್ ಗೆ ವಿಕೆಟ್ ಒಪ್ಪಿಸಿದರು. ಜಿತೇಶ್ ಶರ್ಮಾ 16 ರನ್ ಔಟಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಗೂಡಿದ ಶಶಾಂಕ್ ಸಿಂಗ್ 61 ರನ್ ಭಾರಿಸಿದರು. ಆಷುತೋಶ್ ಶರ್ಮಾ 31 ರನ್ ಚಚ್ಚಿದರು.
.






