ಉತ್ತರ ಪ್ರದೇಶ : ದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಇಂದು ಅಲಿಘರ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಯೋಗಿ ಅಂತಹ ಸಹೋದ್ಯೋಗಿ ಇರುವುದು ನಮಗೆಲ್ಲ ಹೆಮ್ಮೆ ಎಂದರು.
ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿಯನ್ನು ಅವರು ಮುಂದುವರಿಸಿದರು.
ಉತ್ತರ ಪ್ರದೇಶದಲ್ಲಿ ಹೊಸ ಅಭಿವೃದ್ಧಿಯ ಯೋಸ ಯುಗವನ್ನು ಪ್ರಾರಂಭಿಸಿದ್ದಾರೆ. ಅವರಿಂದಾಗಿ ರಾಜ್ಯವೇ ಬದಲಾಗುತ್ತಿದೆ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶ ಆತ್ಮ ನಿರ್ಭರ ಭಾರತದ ಹಬ್ ಆಗಿ ಬದಲಾಗುತ್ತಿದೆ. ಇಲ್ಲಿರುವುದು ಆತ್ಮ ನಿರ್ಭರ ಸೇನಾ. ಯಾರು ಯೋಗಿಯವರನ್ನು ಬುಲ್ಡೋಜರ್ ಜೊತೆ ಹೋಲಿಸುತ್ತಾರೋ ಅವರಿಗೆ ಈ ಮಾತು ಹೇಳಲು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಔಧ್ಯಮಿಕ ಅಭಿವೃದ್ಧಿಯಾಗುತ್ತಿದೆ. ಸ್ವಾತಂತ್ರ್ಯ ಬಂದ ಮೇಲೆ ಈ ರೀತಿಯ ಅಭಿವೃದ್ಧಿ ಇಲ್ಲಿ ಆಗಿರಲಿಲ್ಲ ಎಂದು ಪ್ರಧಾನಿ ಹೇಳಿದರು.







