ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
MDH ಮಸಾಲಾ ಮತ್ತು ಎವೆರೆಸ್ಟ್ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶ : ಹಾಂಕಾಂಗ್ ನಲ್ಲಿ ನಿಷೇಧ
MDH Everest Spices Banned: ಹಾಂಕಾಂಗ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಈ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಬರಬಹುದಾದ ಅಂಶಗಳು ಇರುವುದು ಪತ್ತೆಯಾಯಿತು
ನವದೆಹಲಿ : ರಾಮದೇವ್ ಅವರ ಪತಂಜಲಿ ಉತ್ಪನ್ನಗಳ ವಿಶ್ವಾಸಾರ್ಹತೆ ಕುರಿತು ನ್ಯಾಯಾಲಯ ತೀರ್ಪು ನೀಡಿದ ಮೇಲೆ ಇನ್ನೊಂದು ಬೆಳವಣಿಗೆ ನಡೆದಿದೆ. ಭಾರತದ ನಾಲ್ಕು ಪ್ರಮುಖ ಉತ್ಪನ್ನಗಳನ್ನು ಹಾಂಕಾಂಗ್ ನಿಷೇಧಿಸಿದೆ.
ಈ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ಅಂಶಗಳಿವೆ ಎನ್ನುವುದು ಇದಕ್ಕೆ ಕಾರಣ. ಎಂ ಡಿ ಎಚ್ ಮಸಾಲಾ ಮತ್ತು ಎವರೆಸ್ಟ್ ಮಸಾಲೆ ಪದಾರ್ಥಗಳು ಇದರಲ್ಲಿ ಸೇರಿವೆ. ಹಾಂಕಾಂಗ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಈ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಬರಬಹುದಾದ ಅಂಶಗಳು ಇರುವುದು ಪತ್ತೆಯಾಯಿತು.
ಈ ಉತ್ಪನ್ನಗಳಲ್ಲಿ ಎಥಲೀನ್ ಒಕ್ಸೈಡ್ ಎಂಬ ಕ್ರಿಮಿನಾಶಕ ಇರುವುದು ಪತ್ತೆಯಾಯಿತು. ಎಂ ಡಿ ಹೆಚ್ ಮಸಾಲಾದ ಮದ್ರಾಸ್ ಕರಿ ಪೌಡರ್ಮ್ ಮಿಕ್ಶಡ್ ಮಸಾಲಾಪೌಡರ್ ಮತ್ತು ಸಾಂಬಾರ್ ಮಸಾಲದಲ್ಲಿ ಈ ಅಂಶಗಳಿವೆ. ಹಾಗೆ ಎವರೆಸ್ಟ್ ನ್ ಫಿಶ್ ಕರಿಯಲ್ಲು ಇದೇ ಅಂಶ ಪತ್ತೆಯಾಗಿದೆ.
