ನವದೆಹಲಿ : ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ. ಕರ್ನಾಟಕದ ಸಾಮಾನ್ಯ ಜನ ಸರ್ಕಾರದ ಗ್ಯಾರಂಟಿಯನ್ನು ಶ್ಲಾಘಿಸುತ್ತಿದ್ದಾರೆ. ಇದರಿಂದ ಆತಂಕಗೊಂಡಿರುವ ಬಿಜೆಪಿ ಈಗ ಚುನಾವಣಾ ಆಯೋಗದ ಮೊರೆ ಹೋಗಿದೆ. ಬಿಜೆಪಿಯ ನಿಯೋಗ ಇವತ್ತು ಚುನಾವಣಾ ಅಯೋಗವನ್ನು ಭೇಟಿ ಮಾಡಿ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ದೂರು ಸಲ್ಲಿಸಿತು.
ಕಾಂಗ್ರೆಸ್ ಗ್ಯಾರಂಟಿಯನ್ನು ಪ್ರಚಾರಕ್ಕೆ ಬಳಸಿಕೊಂಡು ಮತದಾರರ ಓಲೈಕೆ ಮಾಡುತ್ತಿದೆ. ಹಾಗೆ ಗ್ಯಾರಂಟೀ ಕಾರ್ಡ್ ಗಳ ಮೂಲಕ ಸಾಮಾನ್ಯ ಮತದಾರರಿಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂಬುದು ಬಿಜೆಪಿ ದೂರು.
ಮತದಾರರಿಗೆ ಘರ್ ಘರ್ ಗ್ಯಾರಂಟಿ ಪತ್ರವನ್ನು ಕಾಂಗ್ರೆಸ್ ನೀಡುತ್ತಿದೆ. ಇದು ಲಂಚ ನೀಡಿದಂತೆ. ಚುನಾವಣಾ ಅಯೋಗ ಇದಕ್ಕೆ ತಡೆ ಒಡ್ದಬೇಕು ಎಂದು ಈ ನಾಯಕರು ಒತ್ತಾಯಿಸಿದರು.
ಏಪ್ರಿಲ್ 3 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. ಇದಾದ ಮೇಲೆ ಗ್ಯಾರಂಟಿ ಅರ್ಜಿ ಪತ್ರವನ್ನು ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ವಿತರಣೆ ಮಾಡುತ್ತಿದ್ದರು.
ಕಾಂಗ್ರೆಸ್ ವಿತರಿಸುವ ಈ ಗ್ಯಾರಂಟಿ ಕಾರ್ಡ್ ಗಳಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಸಹಿ ಇದೆ. ಇದಕ್ಕೂಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಗ್ಯಾರಂಟಿ ಪತ್ರದ ಮೂಲಕ ಮತದಾರರ ನಂಬಿಕೆಯನ್ನು ದುರೂಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದು ಚುನಾವಣಾ ಅಕ್ರಮ. ಚುನಾವಣಾ ಅಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿಯ ಈ ನಿಯೋಗದಲ್ಲಿ ಅರುಣ್, ಸಿಂಗ್, ಸಂಜಯ್ ಮಯೂಕ, ವಿ.ಎಲ್ ನರಸಿಂಹರಾವ್ ಮತ್ತು ಓಂ ಪ್ರಕಾಶ್ ಇದ್ದರು.






