ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಪರೂಪದಲ್ಲಿ ಅಪರೂಪದ ಮಾಧ್ಯಮ ಸಂದರ್ಶನ ಒಂದನ್ನು ನೀಡಿದ್ದಾರೆ. ಅದು ಎ ಎನ್ ಐ ಎಂಬ ಸುದ್ದಿ ಸಂಸ್ಥೆಗೆ. ಮೋದಿಯವರು ಭಾರತದಲ್ಲಿ ಏನಾದರೂ ಹೇಳುವುದಿದ್ದರೆ ಈ ಸಂಸ್ಥೆಯ ಹೆಣ್ಣು ಮಗಳನ್ನು ಕರೆದು ಆಕೆಗೆ ಸಂದರ್ಶನ ನೀಡಿ ಬಿಡುತ್ತಾರೆ.
ಆಕೆ ಒಳ್ಳೆಯ ಹೆಣ್ಣು ಮಗಳು. ಕಷ್ಟದ ಪ್ರಶ್ನೆ ಕೇಳುವುದಿಲ್ಲ. ಕೇಳು ಎಂದು ಹೇಳುವ ಪ್ರಶ್ನೆಯನ್ನು ಮಾತ್ರ ಕೇಳುತ್ತಾರೆ. ನೀವು ಬೇಕಾದ ಉತ್ತರ ನೀಡಬಹುದು. ಯಾವ ತೊಂದರೆಯೂ ಇಲ್ಲ.

ನಾನು ಈ ದೇಶಕ್ಕಾಗಿ ಅತಿ ದೊಡ್ದ ಯೋಜನೆ ಹೊಂದಿದ್ದೇನೆ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿದ್ದೇನೆ. ಇದರಿಂದ ಯಾರೂ ಭಯಪಡಬೇಡಿ ಎಂದು ಪ್ರಧಾನಿ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ನನ್ನ ಕನಸು ಇರುವುದು 2047 ರ ಹೊತ್ತಿಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡುವುದು ಮಾತ್ರ, ಇದಕ್ಕೆ ಬೇಕಾದ ಯೋಜನೆ ನನ್ನ ಬಳಿ ಇದೆ. ಇದನ್ನೆ ನಾನು ಸಾರ್ವಜನಿಕ ಸಭೆಯಲ್ಲಿ ಹೇಳುತ್ತಿದ್ದೇನೆ. ಇದಕ್ಕೆ ಯಾರೂ ಹೆದರಬೇಕಾಗಿಲ್ಲ ಎಂದು ಪ್ರಧಾನಿ ಹೇಳಿದರು.

ನಾನು ಅತಿ ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದರೆ ಅದು ಹೆದರಿಸಲು ಹೇಳುವ ಮಾತಲ್ಲ. ನಾನು ದೇಶದ ಅಭಿವೃದ್ಧಿಗಾಗಿ ದೊಡ್ದ ದೊಡ್ದ ಯೋಜನೆಗಳನ್ನು ಸಿದ್ದಪಡಿಸುತ್ತೇನೆ. ಎಂದರು.

ದೇಶದ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯೇ ಹೊರತೂ ಭಯ ಹುಟ್ಟಿಸುವುದಲ್ಲ. ಜೊತೆಗೆ ಸರ್ಕಾರ ಸದಾ ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಲೇ ಇರುತ್ತದೆ. ನಾನು ಮಾತ್ರ ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳುವುದಿಲ್ಲ. ನಾನು ಹಾಗೆ ನಂಬುವುದೂ ಇಲ್ಲ. ಆದರೆ ಸರಿಯಾದ ದಿಕ್ಕಿನಲ್ಲಿ ಎಲ್ಲವನ್ನೂ ಮಾಡಲು ನಾನು ಯತ್ನಿಸಿದ್ದೇನೆ. ಇನ್ನೂ ಬಹಳಷ್ಟು ಮಾಡಬೇಕಾಗಿದೆ, ನನ್ನ ದೇಶಕ್ಕೆ ಸಾಕಷ್ಟು ಅವಶ್ಯಕತೆ ಇದೆ. ಇದನ್ನೆಲ್ಲ ನಾನು ಪೂರ್ಣಗೊಳಿಸಬೇಕು. ಹೀಗಾಗಿ ಈಗಿನದನ್ನು ನಾನು ಟ್ರೇಲರ್ ಎಂದು ಕರೆದಿದ್ದೇನೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *