ನಮ್ಮ ಶಿವಸೇನೆ ನಿಮ್ಮ ಪದವಿಯಂತೆ ನಕಲಿ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ ಉದ್ದವ್ ಠಾಕ್ರೆ

Uddhav Thackeray : ಯೋಜನೆಗಳನ್ನು ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಪರಿಸರ ವಿನಾಶಕಾರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಮುಂಬೈ : ಉತ್ತಮ ಅಭಿವೃದ್ಧಿ ಯೋಜನೆಗಳನ್ನು ಗುಜರಾತಿಗೆ ಕೊಂಡೊಯ್ಯಲಾಗುತ್ತಿದೆ. ಪರಿಸರ ವಿನಾಶಕಾರಿ ಯೋಜನೆಗಳನ್ನುಮಹಾರಾಷ್ಟ್ರಕ್ಕೆ ನೀಡಲಾಗುತ್ತಿದೆ ಎಂದು ಶಿವಸೇನೆ ಮುಖ್ಯಸ್ಥ್ ಉದ್ದವ್ ಠಾಕ್ರೆ ಆರೋಪಿಸಿದ್ದಾರೆ.

ಜೊತೆಗೆ ತಮ್ಮ ಪಕ್ಷವನ್ನು ನಕಲಿ ಶಿವಸೇನೆ ಎಂದು ಕರೆದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರಿ ತರಾಟೆಗೆ ತೆಗೆದುಕೊಂಡರು. ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಉದ್ದವ್ ಠಾಕ್ರೆ ಅವರ ಶಿವಸೇನೆಯನ್ನು ನಕಲಿ ಶಿವಸೇನೆ ಎಂದು ಪ್ರಧಾನಿ ಕರೆದಿದ್ದರು. ಇದು ಠಾಕ್ರೆ ಅವರನ್ನು ಕೆರಳಿಸಿತ್ತು.
ನಮ್ಮ ಪಕ್ಷವನ್ನು ನಕಲಿ ಎಂದು ಕರೆಯಲು ಅದು ನಿಮ್ಮ ಪದವಿ ಅಲ್ಲ ಎಂದು ಅವರು ಜಾಡಿಸಿದರು.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಉತ್ತಮ ಯೋಜನೆಗಳನ್ನು ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಪರಿಸರ ವಿನಾಶಕಾರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಪಾಲ್ಘರ್‌ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಉದ್ಧವ್ ಠಾಕ್ರೆ ಭರವಸೆ ನೀಡಿದರು.
“ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಶಿವಸೇನಾ ಪ್ರಮುಖ್(ಬಾಳ ಠಾಕ್ರೆ) ಸ್ಥಾಪಿಸಿದ ಶಿವಸೇನೆಯನ್ನು ನಕಲಿ ಎಂದು ಕರೆಯಲಾಗುತ್ತಿದೆ. ಅದನ್ನು ನಕಲಿ ಎಂದು ಕರೆಯಲು ‘ನಿಮ್ಮ ಪದವಿ ಅಲ್ಲ” ಎಂದು ಠಾಕ್ರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಾರದ ಆರಂಭದಲ್ಲಿ, ಮಹಾರಾಷ್ಟ್ರದ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಠಾಕ್ರೆ ನೇತೃತ್ವದ ಶಿವಸೇನೆ ನಕಲಿ ಎಂದು ಕರೆದಿದ್ದರು.

Author

error: