ಮಿಂಚಿದ ಚೆನ್ನೈ, ಕೋಲ್ಕತ್ತಾ ಬೆನ್ನು ಮುರಿದ ದೋನಿ ತಂಡ.. ತಂಡ ಕಟ್ಟುವುದು ಹೇಗೆ ಎನ್ನುವುದಕ್ಕೆ ಮಾಧರಿಯಾಯಿತು ದೋನಿ ಪಡೆ

ಚೆನ್ನೈ ; ಒಂದು ತಂಡವನ್ನು ಕಟ್ಟುವುದು ಹೇಗೆ ಎನ್ನ ಪ್ರಶ್ನೆಗೆ ಉತ್ತರ ಚೆನ್ನೈ ಸುಪರ್ ಕಿಂಗ್ಸ್.. ಅಬ್ಬ ಎಂತಹ ಆಟ. ನಿನ್ನೆ ಕೋಲ್ಕತ್ತಾ ವಿರುದ್ಧ ಆಡಿದ ಆಟ ಆಮೋಘ. ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕಲೆದಕೊಂಡಿದ್ದ ಲಯವನ್ನು ಮತ್ತೆ ಕಂಡುಕೊಂಡರು. ಬೌಲಿಂಗ್ ನಲ್ಲಿ ರವೀಂದ್ರ ಜಡೆಜಾ ೧೮ ರನ್ ಗೆ ಮೂರು ವಿಕೆಟ್ ಪಡೆಯುವ ಮೂಲಕ ಕೊಲಕತ್ತಾ ಬ್ಯಾಂಟೀಂಗ್ ಬೆನ್ನು ಮುರಿದರು. ಅಂತಿಮವಾಗಿ ಚೆನ್ನೈ 7 ವಿಕೆಟ್ ಜಯ ಸಾಧಿಸಿತು.

ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿದಿತ್ತು. ದೋನಿ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಚೆನ್ನೈ ಈ ಬಾರಿ ಹೆಗೆ ಆಡಬಹುದು ಎಂಬ ಆತಂಕ ಇದ್ದೇ ಇತ್ತು. ಆದರೆ ಒಂದು ತಂಡಕ್ಕೆ ಹಾಕಿದ ಬುನಾದಿ ಬಹಳ ಮುಖ್ಯ. ಅಂತಹ ಬುನಾದಿಯನ್ನು ಹಾಕಿದವರು ದೋನಿ. ಹೀಗಾಗಿ ಜಯದ ಲಯ ಕಂಡುಕೊಳ್ಳುವುದು ಚೆನ್ನೈಗೆ ಕಷ್ಟವಾಗಲಿಲ್ಲ.

ಚೆನ್ನೈ ಪರ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರಿಂದ ಆಕರ್ಷಕ ಅರ್ಧಶತಕ . ಎದುರಿಸಿದ 58 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಅಜೇಯ 67 ರನ್‌ . ಇವರಿಗೆ ನೆರವು ನೀಡಿದ ಡ್ಯಾರಿಲ್‌ ಮಿಚೆಲ್‌ 25 ರನ್‌ ಹಾಗೂ ಶಿವಂ ದುಬೆ 28 ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇನ್ನು ಅನಿರೀಕ್ಷಿತವಾಗಿ ಬ್ಯಾಟಿಂಗ್‌ ವೈಫಲ್ಯ ಕೊಲಕತ್ತಾ ತಂಡದ್ದಾಯಿತು., ಸುನೀಲ್ ನರೇನ್‌ 27, ಅಂಗಕೃಷ್‌ ರಘುವಂಶಿ 24 ಹಾಗೂ ಶ್ರೇಯಸ್‌ ಅಯ್ಯರ್‌ ೩೪ ರನ್ ಗಳಿಸಿದರೂ ಅದು ಸಾಕಾಗಲಿಲ್ಲ. ಉತ್ತಮ ಆರಂಭ ದೊರಕಿದರೂ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಕೊಲಕತ್ತಾ ವಿಫಲವಾಯಿತು, ಇನ್ನುಳಿದ ಬ್ಯಾಟರ್‌ಗಳು ಕನಿಷ್ಠ ವೈಯಕ್ತಿಕ 15 ರನ್‌ ಗಳಿಸಲು ಕೂಡ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕೆಕೆಆರ್‌ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿತು.

Author

error: