ಚೆನ್ನೈ: ತಮಿಳು ಸೂಪರ್​ ಸ್ಟಾರ್​​ ನಟ ವಿಶಾಲ್​​ ಆರೋಗ್ಯದಲ್ಲಿ ಏರುಪೇರಾಗಿದೆ. ನಡುಗುವ ಕೈ, ತೊದಲು ಮಾತಿನ ವಿಶಾಲ್ ವಿಡಿಯೋ ವೈರಲ್ ಆದ ಬಳಿಕ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇದೀಗ ವಿಶಾಲ್ ಆರೋಗ್ಯ ಮತ್ತೆ ಹದೆಗೆಟ್ಟಿದೆ ಎನ್ನಲಾಗ್ತಿದೆ.

ಮಧ ಗಜ ರಾಜ ಸಿನಿಮಾದ ಪ್ರಮೋಷನ್‌ ವೇಳೆ ನಟ ವಿಶಾಲ್ ಆರೋಗ್ಯ ಸರಿಯಿಲ್ಲ ಅನ್ನೋ ವಿಚಾರ ಬಯಲಾಗಿತ್ತು. ಕೈಯಲ್ಲಿ ಮೈಕ್ ಹಿಡಿದು ಮಾತನಾಡಲು ಪರದಾಡಿದ ವಿಶಾಲ್‌ಗೆ ಏನಾಗಿದೆ ಅನ್ನೋ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

ವಿಶಾಲ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಇಷ್ಟಾದರೂ ವಿಶಾಲ್ ಅವರು ತಮ್ಮ ಕನಸಿನ ಮಧ ಗಜ ರಾಜ ಸಿನಿಮಾಗಾಗಿ ಹೊರ ಬಂದಿದ್ದರು. ಸದ್ಯ ವಿಶಾಲ್ ಅವರು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಮಾಹಿತಿ ಪ್ರಕಾರ ವಿಶಾಲ್ ಅವರಿಗೆ ವೈರಲ್ ಇನ್ಫೆಕ್ಷನ್‌ನಿಂದ ತುಂಬಾ ಜ್ವರ ಇದೆ. ಮತ್ತೊಬ್ಬರ ಸಹಾಯದಿಂದ ವಿಶಾಲ್ ಅವರು ನಡೆದಾಡುವ ಸ್ಥಿತಿ ಎದುರಾಗಿದೆ. ವಿಶಾಲ್ ಅವರ ತಂಡದ ಸದಸ್ಯರು ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ.

ಕೆಲವು ದಿನಗಳ ಕಾಲ ಕಂಪ್ಲೀಟ್ ಬೆಡ್ ರೆಸ್ಟ್ ಪಡೆಯಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ವಿಶಾಲ್​ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾವಹಿಸಿದ್ದು ಕೆಲವು ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

Author

Leave a Reply

Your email address will not be published. Required fields are marked *