ಎಸ್ ಐ ಟಿ ಕಚೇರಿಯೇ ಮನೆ, ಬೆಡ್ ರೂಂ, ಪೊಲೀಸ್ ಅಧಿಕಾರಿಗಳು ತಂದುಕೊಟ್ಟ ಊಟ..ಪೋಲಿಸ್ ಕಸ್ಟಡಿಯಲ್ಲಿ ರೇವಣ್ಣ ಫಸ್ಟ್ ನೈಟ್..!

H D Revanna : ರೇವಣ್ಣ ಅವರನ್ನು ಬಂಧಿಸಿದ ಪೊಲೀಸರು ಅರಮನೆ ರಸ್ತೆಯಲ್ಲಿರುವ ಎಸ್ ಐ ಟಿ ಕಚೇರಿಗೆ ಕರೆ ತಂದರು. ನಂತರ ಅಲ್ಲಿಂದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಂಗಳೂರು : ನೋಡಿ ಬದುಕು ಎಂದರೆ ಹಾಗೆ. ನಿನ್ನೆಯ ವರೆಗೆ ಮಹಾರಾಜ. ನಿನ್ನೆ ರಾತ್ರಿ ಒಬ್ಬ ಸಾಮಾನ್ಯ ಕೈದಿ. ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದವರಿಗೆ ಪೊಲೀಸ್ ಕಸ್ಟಡಿಯ ರಾತ್ರಿ. ಮಾಜಿ ಪ್ರಧಾನಿಯ ಮಗ ಈಗ ಆರೋಪಿ.

ನಿನ್ನೆ ಸಂಜೆ ರೇವಣ್ಣ ಅವರನ್ನು ಬಂಧಿಸಿದ ಪೊಲೀಸರು ಅರಮನೆ ರಸ್ತೆಯಲ್ಲಿರುವ ಎಸ್ ಐ ಟಿ ಕಚೇರಿಗೆ ಕರೆ ತಂದರು. ನಂತರ ಅಲ್ಲಿಂದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷೆ ಮುಗಿಸಿ ವಾಪಸ್ ಕರೆ ತರಲಾಯಿತು. ಎಸ್ ಐ ಟಿ ಅಧಿಕಾರಿಗಳು ರಾತ್ರಿಯ ಊಟ ತರಿಸಿಕೊಟ್ಟರು. ರೇವಣ್ಣ ರಾತ್ರಿಯನ್ನು ಅಲ್ಲೇ ಕಳೆದರು.

ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು. ಅವರ ಮೇಲೆ ಗಂಭೀರ ಆರೋಪ ಇರುವುದರಿಂದ ಪೋಲಿಸರು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

Author

error: