ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಸಂಪಾದಕೀಯ – ಬೆಂಗಳೂರಿನ ನಗರ್ತಪೇಟೆ ಘಟನೆ; ಬೆಂಕಿ ಹಚ್ಚಲು ಸಿದ್ದವಾಗಿರುವ ಕೊಳ್ಳಿ ದೆವ್ವಗಳು…
ಎರಡು ದಿನಗಳ ಹಿಂದಿನ ಮಾತು. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಘಟನೆಯೊಂದು ನಡೆದು ಹೋಯಿತು. ಇದು ನಡೆಯಬಾರದಿತ್ತು..
ಮೊಬೈಲ್ ಅಂಗಡಿಯ ವ್ಯಕ್ತಿಯೊಬ್ಬನ ಮೇಲೆ ನಡೆದ ಹಲ್ಲೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡಲಾಗುತ್ತಿದೆ. ಅಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದು ಈ ಹಲ್ಲೆಗೆ ಕಾರಣ ಎಂಬುದು ಒಂದು ವಾದ.. ಪೊಲೀಸರು ಮೊದಲು ನೀಡಿದ ಪ್ರಕಟಣೆಗೆ ಇದು ಕಾರಣವಲ್ಲ. ಏನೇ ಇರಲಿ ಸತ್ಯ ಹೊರಕ್ಕೆ ಬರಲೇಬೇಕು. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು . ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು.
ಈ ಘಟನೆಯ ವರದಿಯಾಗುತ್ತಿದ್ದಂತೆ ದಿಡೀರ್ ಆಗಿ ಎದ್ದು ಕುಳಿತವರು ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್
ಇವರು ಘಟನೆ ನಡೆದ ಮರು ದಿನವೇ ಸ್ಥಳಕ್ಕೆ ಧಾವಿಸಿದರು.. ಆಗಲೇ ಅಲ್ಲಿ ರಾಜಕೀಯ ಯಜ್ನ ಪ್ರಾರಂಭವಾಗಿತ್ತು. ಈ ಯಜ್ನಕ್ಕೆ ಹವಿಸ್ಸು ಸಮರ್ಪಿಸಬೇಕಾಗಿತ್ತು. ಯಜ್ನ ಕುಂಡಕ್ಕೆ ತುಪ್ಪ ಸುರಿಯಬೇಕಾಗಿತ್ತು. ಈ ಕೆಲಸವನ್ನು ಪ್ರಾರಂಭಿಸಿದವರು ಯಜ್ನದ ಯಜಮಾನರಾದ ತೇಜಸ್ವಿ ಸೂರ್ಯ.
ಮರು ದಿನ ಎಂದರೆ ಇವತ್ತು ಮಂಗಳವಾರ ಎಲ್ಲ ಕಾರ್ಯಕರ್ತರು ಸ್ಥಳದಲ್ಲಿ ಬಂದು ಸೇರಿವಂತೆ ಕರೆ ನೀಡಿದರು. ಬರುವಾಗ ಕೇಸ್ಸರಿ ಶಾಲು ಧ್ವಜವನ್ನು ಹಿಡಿದು ಬರಬೇಕು ಎಂದು ಅವರು ಸೂಚಿಸಿದರು. ಹಾಗೆ ನೋಡಿದರೆ ಇಂತಹ ಪ್ರತಿಭಟನೆಗೆ ಕರೆ ನೀಡಬೇಕಾದ ಅಗತ್ಯವೇ ಇರಲಿಲ್ಲ. ಆಗಲೇ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಮಂಗಳವಾರದ ಹೊತ್ತಿಗೆ ಐವರ ಬಂಧನವೂ ಆಗಿತ್ತು. ಆದರೆ ತೇಜಸ್ವಿ ಸೂರ್ಯ ಅವರಿಗೆ ಇಷ್ಟು ಸಾಕಾಗಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ಪ್ರಕರಣವನ್ನು ಹಿಂದೂಗಳನ್ನು ಒಗ್ಗೂಡಿಸಿಕೊಳ್ಳಲು ಬಳಸಿಕೊಳ್ಳುವ ಯೋಜನೆಯನ್ನು ಅವರು ಸಿದ್ದಪಡಿಸಿಯಾಗಿತ್ತು.
ಬೆಂಗಳೂರಿನಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ, ಪೋಲಿಸರು ಕಾಂಗ್ರೆಸ್ ಸರ್ಕಾರದ ಅಡಿಯಾಳಾಗಿದ್ದಾರೆ ಎಂದು ಬಿಂಬಿಸುವುದು ಅವರ ಉದ್ದೇಶವಾಗಿತ್ತು.
ಅವರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೆಲವು ಮಾಧ್ಯಮಗಳು ಕೈಜೋಡಿಸಿದ್ದವು..ಅದಕ್ಕೆ ಪೂರಕವಾಗಿ ಅವರು ವರದಿ ಮಾಡಲು ಪ್ರಾರಂಭಿಸಿದವು. ಈ ಮಾಧ್ಯಮಗಳನ್ನು ನೋಡಿದಾಗ ನಗರ್ತ ಪೇಟೆ ಹೊತ್ತಿ ಉರಿಯುತ್ತಿದೆ ಎಂಬ ಭಾವನೆ ಬರುವಂತಿತ್ತು..
ತೇಜಸ್ವಿ ಸೂರ್ಯ ಅವರ ಸೂಚನೆಯ ಮೇರೆಗೆ ಸಾವಿರಾರು ಜನರು ಪ್ರತಿಭಟನೆಗೆ ಬಂದಿರಲಿಲ್ಲ. ಕೆಲವೇ ನೂರು ಜನ ಕೇಸರಿ ಶಾಲು ಮತ್ತು ಧ್ವಜ ಹಿಡಿದು ಬಂದಿದ್ದರು.. ಗೋದಿ ಮೀಡಿಯಾಕ್ಕೆ ಇಷ್ಟೇ ಸಾಕಿತ್ತು..ಇರುವ ಕೆಲವೇ ನೂರು ಜನರನ್ನು ಸಾವಿರಾರು ಜನರಂತೆ ತೋರಿಸಲು ಕ್ಲೋಸ್ ಅಪ್ ಶಾಟ್ ಗಳನ್ನು ಬಳಸಲಾಯಿತು. ತೇಜಸ್ವಿ ಸೂರ್ಯ ಹಿಂದೂ ಮಹಾ ಸಾಮ್ರಾಟನಂತೆ ತೋರಿಸಲು ಯತ್ನಿಸಲಾಯಿತು.. ಪೊಲೀಸರ ನಡುವೆ ನಿಂತ ತೇಜಸ್ವಿ ಸೂರ್ಯ ಕ್ಯಾಮರಾಗಳಿಗೆ ಬೇಕಾದಂತೆ ಫೋಸು ನೀಡತೊಡಗಿದರು..
ಪೋಲಿಸರು ಹೆಚ್ಚಿನ ತುಕಡಿಗಳನ್ನು ಸ್ಥಳಕ್ಕೆ ತರಿಸಿಕೊಂಡರು..ಅಲ್ಲಿ ಸೇರಿದ್ದ ಜನರಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಲಾಯಿತು. ನಿಷೇದಾಜ್ನೆಯನ್ನು ವಿಧಿಸಲಾಯಿತು..
ಈ ಜನರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ ನಾವು ಶಾಂತಯುತವಾಗಿ ಪ್ರತಿಭಟನೆ ಧರಣಿ ಮಾಡೋಣ ಎಂದು ಕರೆ ನೀಡಿದರು. ಸ್ವಲ್ಪ ಸಮಯದ ನಂತರ ಹೆಚ್ಚಿನ ಪೋಲಿಸರನ್ನು ನೋಡಿದ ಪ್ರತಿಭಟನೆ ಕಾರರು ಅಲ್ಲಿಂದ ಸಾವುಕಾಶವಾಗಿ ಜಾಗ ಖಾಲಿ ಮಾಡತೊಡಗಿದರು. ಕೇಸರು ಶಾಲು ಮತ್ತು ಧ್ವಜ ಮರೆಯಾಗತೊಡಗಿದವು..ಆದರೆ ತೇಜಸ್ವಿ ಸೂರ್ಯ ಯಾವು ಉದ್ದೇಶದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರೋ ಅದು ಈಡೇರಿತ್ತು. ಹಿಂದುಗಳ ಮನಸ್ಸಿನಲ್ಲಿ ವಿಷವನ್ನು ಬಿತ್ತಿ ಮುಗಿದು ಹೋಗಿತ್ತು.
ಈ ಘಟನೆಯ ಆರೋಪಿಗಳನ್ನು ಘಟನೆ ನಡೆದ ಎರಡೇ ದಿನಗಳಲ್ಲಿ ಪೋಲಿಸರು ಬಂಧಿಸಿದ್ದರು. ಅವರು ತಮ್ಮ ಕೆಲಸ ಮಾಡಿದ್ದರು. ಹೀಗಿರುವಾಗ ಪ್ರತಿಭಟನೆಯ ಅಗತ್ಯ ಏನಿತ್ತು ? ಪೋಲಿಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ ಆಗ ಪ್ರತಿಭಟನೆ ಮಾಡಿದ್ದರೆ ಅದು ಸರಿ. ಆದರೆ ಪೋಲಿಸರು ವಿಳಂಬ ಮಾಡದೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ ಮೇಲೂ ಪ್ರತಿಭಟನೆ ಯಾಕೆ ? ಪೋಲಿಸರು ತ್ವರಿತ ಗತಿಯಿಂದ ಕೆಲಸ ಮಾಡಿದ್ದಕ್ಕಾ ? ಆರೋಫಿಗಳನ್ನು ಬಂಧಿಸಿದ್ದಕ್ಕಾ ?
ಹೇಳಿ ತೇಜಸ್ವಿ ಸೂರ್ಯ ಅವರೇ….
