ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ; ಇಬ್ಬರು ಶಂಕಿತರು ವಶಕ್ಕೆ: ಕೊಲಕತ್ತಾದಿಂದ ಬೆಂಗಳೂರಿಗೆ ಕರೆತರುತ್ತಿರುವ ಅಧಿಕಾರಿಗಳು

Rameshwaram Cafe Blast Case ; ಎನ್ ಐ ಎ ಮೂಲಗಳ ಪ್ರಕಾರ ಈ ಮುಸಾವೀರ್ ಎಂಬಾತನೇ ರಾಮೇಶ್ವರ್ಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ. ಅಬ್ದುಲ್ ಮತೀನ್ ಸಂಚು ರೂಪಿಸಿದ್ದ. ಈಗ ಇವರಿಬ್ಬರನ್ನೂ ಬೆಂಗಳೂರಿಗೆ ಕರೆ ತರಲಾಗುತ್ತಿದೆ.

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಇಬ್ಬರು ಶಂಕಿತರನ್ನು ಎನ್ ಐ ಎ ಬಂಧಿಸಿದೆ. ಇಂದು ಬೆಳಗಿನ ಜಾವ ಕೊಲಕತ್ತಾ ಸಮೀಪ ಇವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೀರ್ಥಹಳ್ಳಿಯ ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ಅಹಮದ್ ತಾಹ ಬಂಧಿತರು. ಇವರು ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎನ್ ಐ ಎ ಅಧಿಕಾರಿಗಳು ಇಂದು ಅವರನ್ನು ಬಂಧಿಸಿದರು.

ಇದೇ ಪ್ರಕರಣದಲ್ಲಿ ಈಗಾಗಲೇ ಮುಜಮೀಳ್ ಹಾಗೂ ಮಾಝ್ ಮುನೀರ್ ಎಂಬವರನ್ನು ಬಂಧಿಸಲಾಗಿದೆ.

ಎನ್ ಐ ಎ ಮೂಲಗಳ ಪ್ರಕಾರ ಈ ಮುಸಾವೀರ್ ಎಂಬಾತನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ. ಅಬ್ದುಲ್ ಮತೀನ್ ಸಂಚು ರೂಪಿಸಿದ್ದ. ಈಗ ಇವರಿಬ್ಬರನ್ನೂ ಬೆಂಗಳೂರಿಗೆ ಕರೆ ತರಲಾಗುತ್ತಿದೆ.

Author

Leave a Reply

Your email address will not be published. Required fields are marked *