ಉದಂಪುರ (ಜಮ್ಮು ಮತ್ತು ಕಾಶ್ಮೀರ) : ಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮಾನ ನೀಡುತ್ತೇವೆ. ಆದರೆ ಇಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸಲು ಇದು ಸಕಾಲ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉದಂಪುರ ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನ ಮಾನ ನೀಡಲು ನಾವು ಬದ್ಧರಿದ್ದೇವೆ, ಇದಾದ ಮೇಲೆ ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು,
ಮೋದಿಗೆ ಮುಂದಾಲೋಚನೆ ಇದೆ. ನಾನು ದೂರಾಲೋಚನೆಯಿಂದ ಕೆಲಸ ಮಾಡುತ್ತೇನೆ. ನಾನು ಇದುವರೆಗೆ ಏನು ಮಾಡಿದ್ದೇನೆ ಅದು ಟ್ರೇಲರ್ ಮಾತ್ರ. ಹೊಸ ಜಮ್ಮು ಮತ್ತು ಕಾಶ್ಮೀರದ ಸುಂದರ ಚಿತ್ರವನ್ನು ಸೃಷ್ಟಿಸುವ ಬಗ್ಗೆ ನಾನು ಯೋಚಿಸಬೇಕಾಗಿದೆ. ಎಂದು ಪ್ರಧಾನಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಕಾಲ ತುಂಬಾ ದೂರವಿಲ್ಲ. ರಾಜ್ಯದ ಸ್ಥಾನ ಮಾನ ಅದಕ್ಕೆ ದೊರಕುತ್ತದೆ. ನೀವು ನಿಮ್ಮ ಶಾಸಕರು ಮತ್ತು ಸಚಿವರ ಜೊತೆ ನಿಮ್ಮ ಕನಸನ್ನು ಹಂಚಿಕೊಳ್ಳಬಹುದು ಎಂಬ ಭರವಸೆಯನ್ನು ಪ್ರಧಾನಿ ನೀಡಿದರು.
