ಪ್ರಧಾನಿ ನರೇಂದ್ರ ಮೋದಿ ಅವರ ಚುಆವಣಾ ಪ್ರಚಾರದ ಎರಡನೆಯ ಸಭೆ ಇಂದು ಶಿವಮೊಗ್ಗದಲ್ಲಿ ನಡೆಯಲಿದೆ. ಆದರೆ ಈ ಸಭೆಗೆ ಬಂಡಾಯದ ಬಿಸಿ ತಟ್ಟ್ಟಿದರೂ ಆಶ್ಚರ್ಯ ಇಲ್ಲ.
ಶಿವಮೊಗ್ಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ತವರು. ಹಾಗೆ ಈ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ರಾಅಜಕಈಯದಾಟದ ಅಂಗಳ ಕೂಡ..
ಪಕ್ಷದ ಮೇಲೆಮುನಿಸಿಕೊಂಡಿರುವ ಈ ಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಪ್ರಧಾನಿ ಅವರ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಹಾಗೆ ಪಕ್ಕದ ದಾವಣಗೆರೆಯಲ್ಲಿ ಬಂಡಾಯದ ಬಾವುಟ ಹಾರಿಸಿರುವವರು ಮಾಜಿ ಸಚಿವ ರೇಣುಕಾಚಾರ್ಯ. ದಾವಣೆಗೆರೆ ಕ್ಷೇತ್ರದಿಂದ ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಅವರು ಮುನಿಸಿಕೊಂಡಿದ್ದಾರೆ. ಅವರ ಗುಂಪು ಕೂಡ ಪ್ರಧಾನಿ ಅವರ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಈ ಬಂಡಾಯದ ನಡುವೆ ಪ್ರಧಾನಿ ಅವರ ಸಭೆಯನ್ನು ಯಶಸ್ವಿಗೊಳಿಸುವ ಜವಾಬ್ದಾಅರಿ ಯಡಿಯೂರಪ್ಪ ಅವರು ಅವರ ಪುತ್ರ ವಿಜಯೇಂದ್ರ ಅವರ ಮೇಲಿದೆ.






