ಮಹಾರಾಷ್ಟ್ರದಲ್ಲಿ ನಮ್ಮದೇ ಪಕ್ಷದ ಗೆಲುವು: ಸಚಿವ ಎಂ ಬಿ ಪಾಟೀಲ ವಿಶ್ವಾಸ

Maharashtra Assembly Elections 2024: ಮಹಾರಾಷ್ಟ್ರದಲ್ಲಿ ಅಲ್ಲಿಯ ಆಡಳಿತ ನೋಡಿ ಮತದಾರರು ರೋಸಿ ಹೋಗಿದ್ದಾರೆ. ಅಲ್ಲಿ ಬಿಜೆಪಿ ನೇತೃತ್ವದಲ್ಲಿ ಅನೈತಿಕ ರಾಜಕಾರಣ ನಡೆಯುತ್ತಿದೆ. ಜನ ಈ ಬಾರಿ ಅದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ

ಬೆಂಗಳೂರು: ಪಕ್ಷದ ಹೈಕಮಾಂಡ್ ಮಹಾರಾಷ್ಟ್ರದ ಪಶ್ಚಿಮ ಭಾಗದ ಹಿರಿಯ ಚುನಾವಣಾ ವೀಕ್ಷಕರನ್ನಾಗಿ ತಮ್ಮನ್ನು ನೇಮಿಸಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಅಲ್ಲಿ ಕಾಂಗ್ರೆಸ್ ಇರುವ ಮೈತ್ರಿಕೂಟ (ಮಹಾವಿಕಾಸ ಅಘಾಡಿ) ಜಯಭೇರಿ ಬಾರಿಸಲಿದೆ ಎಂದು ಸಚಿವ ಎಂ‌ ಬಿ ಪಾಟೀಲ ವಿಶ್ವಾಸ ವ್ಯಕಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಜತೆ ಮೈತ್ರಿ ಹೊಂದಿದೆ. ಅಲ್ಲಿ ಆಡಳಿತಾರೂಢ ಬಿಜೆಪಿ, ಸೇನೆ ಮತ್ತು ಶಿಂದೆ ಅವರ ಸೇನಾ ಬಣಗಳ ವಿರುದ್ಧ ದೊಡ್ಡ ಆಡಳಿತಾರೂಢ ಅಲೆ ಎದ್ದಿದೆ ಎಂದರು.

ಮಹಾರಾಷ್ಟ್ರದ ಚುನಾವಣೆಯಲ್ಲಿ ಅಲ್ಲಿನ ಸ್ಥಳೀಯ ವಿಚಾರಗಳು ನಿರ್ಣಾಯಕವಾಗಿವೆ. ಮುಡಾ ಪ್ರಕರಣಕ್ಕೂ ಮಹಾರಾಷ್ಟ್ರ ಚುನಾವಣೆಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅಲ್ಲಿಯ ಆಡಳಿತ ನೋಡಿ ಮತದಾರರು ರೋಸಿ ಹೋಗಿದ್ದಾರೆ. ಅಲ್ಲಿ ಬಿಜೆಪಿ ನೇತೃತ್ವದಲ್ಲಿ ಅನೈತಿಕ ರಾಜಕಾರಣ ನಡೆಯುತ್ತಿದೆ. ಜನ ಈ ಬಾರಿ ಅದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.

ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರ, ಮೀರಜ್ ಇತ್ಯಾದಿ ಕಡೆ ಮೊದಲಿನಿಂದ ತಮಗೆ ಒಡನಾಟವಿದೆ. ಹೀಗಾಗಿ ಪಕ್ಷ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ ಎಂದು ಅವರು ಹೇಳಿದರು.

Author

error: