ಕಲಬುರಗಿ: ಹಲ್ಲಿ ಬಿದ್ದ ಆಹಾರ ಸೇವಿಸಿ ಓರ್ವ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಹಲವರಿಗೆ ವಾಂತಿ, ಭೇದಿ ಉಂಟಾದ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ವಾಸವದತ್ತ ಸಿಮೇಂಟ್ ಫ್ಯಾಕ್ಟರಿಯಲ್ಲಿ ನಡೆದಿದೆ.
ಜಿಲ್ಲೆಯ ಸೇಡಂ ಪಟ್ಟಣದಲ್ಲಿರುವ ವಾಸವದತ್ತ ಫ್ಯಾಕ್ಟರಿಯ ಕಾರ್ಮಿಕರ ಕ್ಯಾಂಟಿನ್‌ನ ಆಹಾರದಲ್ಲಿ ಹಲ್ಲಿ ಪತ್ತೆಯಾಗಿದೆ. ಮಧ್ಯಾಹ್ನದ ವೇಳೆ ಅನ್ನ ಸಾಂಬಾರ್ ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲೆ ಕಾಣಿಸಿಕೊಂಡಿದ್ದು, ಶಿವಶರಣಯ್ಯ ಸ್ವಾಮಿ ಮುಧೋಳ ಎಂಬ ಕಾರ್ಮಿಕ ಅಸ್ವಸ್ಥಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ 150 ಕ್ಕೂ ಅಧಿಕ ಜನರು ಮಧ್ಯಾಹ್ನ ಕ್ಯಾಂಟಿನ್ ನಲ್ಲಿ ಊಟ ಸೇವನೆ ಮಾಡಿದ್ದಾರೆ. ಈ ಪೈಕಿ ಹಲವರಿಗೆ ವಾಂತಿಯಾದ ಹಿನ್ನಲೆ ಓ ಆರ್ ಎಸ್ ಗ್ಲುಕೋಸ್ ಕುಡಿಸಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.







