ಮುದ್ದೇಬಿಹಾಳ ಅಭಿವೃದ್ಧಿಗೆ 90 ಕೋಟಿ ಅನುದಾನ; ಶಾಸಕ ಸಿ ಎಸ್ ನಾಡಗೌಡ

Muddebihal MLA C.S Nadagowder: ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ತರುವ ಮೂಲಕ ಸಾರ್ವಜನಿಕರಿಗೆ ಒಂಚರಂಡಿ ಸಂಪರ್ಕ ನೀಡುವುದರೊಂದೆ ಅನುಕೂಲ ಮಾಡುವಲ್ಲಿ ಪ್ರುಯತ್ನಿಸೋಣ

ವರದಿ; ಶ್ರೀಶೈಲ್ ಪೂಜಾರಿ

ವಿಜಯಪುರ: ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವುದರೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸರಕಾರದಿಂದ ಸುಮಾರು 90 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸಧ್ಯದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಮಾದರಿಯ ಪಟ್ಟಣ ಮಾಡುವ ಗುರಿಗೆ ಎಲ್ಲರೂ ಸಹಕಾರ ನೀಡಿ ಕೈ ಜೊಡಿಸಬೇಕು ಎಂದು ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.

ಮುದ್ದೇಬಿಹಾಳ ಪಟ್ಟಣದ ಪುರಸಭೆ ಸಭಾಭವನದಲ್ಲಿ ಸರ್ವಸದಸ್ಯರ ಹಾಗೂ ವಿವಿಧ ಅಧಿಕಾರಿಗಳ ಪ್ರಗತಿ ಪರಿಶೀಲನಾ ಹಾಗೂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಟ್ಟಣದ ಮುಖ್ಯ ಹಳೆ ಬಜಾರದಲ್ಲಿರುವ ಹೊಸದಾಗಿ ವಾಣಿಜ್ಯ ಮಳಿಗೆಗಳನ್ನು ಹೊಂದಿದ ಮಾರುಕಟ್ಟೆ ನಿರ್ಮಿಸಲು ಸರಕಾರದಿಂದ ಇಗಾಗಲೇ 15 ಕೋಟಿ ಪಟ್ಟಣದ ಜನರಿಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಅಮೃತ ಯೋಜನೆ ಅಡಿಯಲ್ಲಿ 25 ಕೋಟಿ, ಕೆರೆ ಅಭಿವೃದ್ಧಿಗೆ ಸೇರಿದಂತೆ ರಸ್ತೆ ಮೂಲಭೂತ ಸೌಲಭ್ಯಗಳನ್ನು ಒದಗಸಲು 5 ಕೋಟಿ, ಎಸ್ ಇ ಪಿ. ಓ ಎಸ್ ಪಿ ಯೋಜನೆಯಡಿಲ್ಲಿ 2 ಕೋಟಿ, ಒಳಚರಂಡಿ ಅಭಿವೃದ್ಧಿಗಾಗಿ 24 ಕೋಟಿ ಅನುದಾನವನ್ನು ಈಗಾಗಲೆ ಸರಕಾರ ಮಂಜೂರಾತಿ ನೀಡಿದ್ದು ಆದಷ್ಟು ಬೇಗ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಪಟ್ಟಣದ ಜನರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಈ ಹಿಂದೆ ನಮ್ಮದೇ ಸರಕಾರದ ಅವಧಿಯಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೇ ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷತನಕ್ಕೆ ಒಳಚರಂಡಿ ಕಾಮಗಾರಿಯು ಸಕಾಲಕ್ಕೆ ಮುಗಿಸದೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಲ್ಲದೇ ನಿತ್ಯ ಸಾರ್ವಜನಿಕರ ಗೋಳಾಟ ಹೇಳತೀರದಂತಾಗಿದೆ. ಯಾಕೇ ಹೀಗೆ ಮಾಡಿದರಿ ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಅಧಿಕಾರಿಗಳು ಸರಕಾರಿ ಕೆಲಸ ಮಾಡುತ್ತಿದ್ದಿರಿ. ಈ ರಾಜ್ಯದ ಜನರು ತೆರಿಗೆ ರೂಪದಲ್ಲಿ ಸರಕಾರಕ್ಕೆ ಕಟ್ಟಿದ ಹಣದಲ್ಲಿ ಸರಕಾರಿ ನೌಕರರಾಗಿ ಸಂಬಳ ಪಡೆದುಕೊಂಡು ನಿಮ್ಮ ಜೀವನ ನಡೆಸುತ್ತಿದ್ದಿರಿ ಎಂಬುದನ್ನು ತಿಳಿದು ಜನರ ಸೇವೆ ಮಾಡುವ ಕೆಲಸ ಮಾಡಿದರೇ ನಿಮಗೆ ಗೌರವ ಸಿಗುತ್ತದೆ ಎಂದು ಒಂಚರಂಡಿ ಮಂಡಳಿ ಹಾಗೂ ಇತರೇ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದರು.

ಈ ವೇಳೆ ಒಂಚರಂಡಿ ಮಂಡಳಿಯ ಎಇಇ ರಾಮರಾವ ರಾಠೋಡ ಅವರು ಮಾತನಾಡಿ 2021ರಲ್ಲಿಯೇ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದೆ ಆದರೇ ಎರಡು ಕಡೆ ಮಿಸ್ಸಿಂಗ್ ಲಿಂಕ್ಸ್ ಕಂಡು ಬಂದಿದ್ದು ಜೊತೆಗೆ ಒಂಚರಂಡಿ ಶೇಖರಣಾ ಘಟಕವೂ ಹಡಲಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಪರವಾನಿ ನೀಡದೆ ಇರುವುದರಿಂದ ಪಟ್ಟಣದ ಜನರಿಗೆ ಸಂಪರ್ಕ ಕೊಡಲು ಸಾಧ್ಯವಾಗಿಲ್ಲ ಎನ್ನುತ್ತಿದ್ದಂತೆ ಗರಂ ಆದ ಶಾಸಕರು ಐದಾರು ವರ್ಷಗಳ ಕಾಲ ಯಾಕೇ ಸುಮ್ಮನಿದ್ದಿರಿ ಆಗಲೇ ಬಗೆಹರಿಸಿಕೊಳ್ಳಬಹುದಿತ್ತಲ್ಲ ಎಂದು ಪ್ರಶ್ನಿಸಿದರಲ್ಲದೇ ಮುಂಬರುವ ಒಂದು ವಾರದೊಳಗೆ ಪಟ್ಟಣದ ಒಳಚರಂಡಿ ಲೋಪಗಳನ್ನು ಸರಿಪಡಿಸಲು ಈಗಾಗಲೇ ಒಡೆದು ಹಾಳಾಗಿ ಹೋಗಿರುವ ಚೆಂಬರಗಳ ದುರಸ್ತಿ ಉಸ್ತುವಾರಿ ನೋಡಿಕೊಳ್ಳಲು ಖರ್ಚಾಗುವ ಅಂದಾಜು ವೆಚ್ಚದ ಬಗ್ಗೆ ಸಂಪೂರ್ಣ ವರದಿ(ಕ್ರೀಯಾ ಯೋಜನೆ) ಸಿದ್ದಪಡಿಸಿ ಕೊಟ್ಟರೇ ಸಂಬಂಧ ಪಟ್ಟ ಇಲಾಖೆಯಾಗಲಿ ಅಥವಾ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ತರುವ ಮೂಲಕ ಸಾರ್ವಜನಿಕರಿಗೆ ಒಂಚರಂಡಿ ಸಂಪರ್ಕ ನೀಡುವುದರೊಂದೆ ಅನುಕೂಲ ಮಾಡುವಲ್ಲಿ ಪ್ರಯತ್ನಿಸೋಣ ಎಂದು ಸೂಚಿಸಿದರು.

ಪಟ್ಟಣದ ಬಹುತೇಕ ವಾರ್ಡ್​​ ಗಳಲ್ಲಿ ವಿವಿಧ ಮೂಲಭೂತ ಸೌಲಭ್ಯಗಳಿಗಾಗಿ ಆಗಾಗ ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸುವ ಮೂಲಕ ಸಾರ್ವಜನಿಕರ ಮತ್ತು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ವಿವಿಧ ವಾರ್ಡುಗಳಲ್ಲಿ ಗುತ್ತಿಗೆದಾರರು ಸರಕಾರದ ನಿಮಯಗಳನ್ನು ಗಾಳಿಗೆ ತೂರಿ ವೈಜ್ಞಾನಿಕವಾಗಿ ಮಾತ್ರವಲ್ಲದೇ ಕಳಪೆ ಮಟ್ಟದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸಿದ್ದು ಕಾರಣ ಎಲ್ಲ ಕಾಮಗಾರಿಗಳನ್ನು ಪುನಃ ಥರ್ಡ ಪಾರ್ಟೀ ತನಿಖೆಗೊಳಿಸಿ ಅಂತಹ ಗುತ್ತಿಗೆದಾರರ ಬಾಕಿ ಹಣವನ್ನು ಮಂಜೂರು ಮಾಡದೇ ತಡೆ ಹಿಡಿದು ಕಪ್ಪು ಪಟ್ಟಿಗೆ ಸೇರಿಸಿ ಜೊತೆಗೆ ಖೊಟ್ಟಿ ದಾಖಲೆ ನೀಡಿ ಪೌರ ಕಾರ್ಮಿಕರಾಗಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದಿದ್ದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೇಟ್ಟಿ ಅವರಿಗೆ ಸೂಚಿಸಿದರು.

ಈ ವೇಳೆ ಪುರಸಭೆ ಆಡಳಿತಾಧಿಕಾರಿ ಹಾಗೂ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೇಟ್ಟಿ ಅವರು ಮಾತನಾಡಿ ರಸ್ತೆ ಬದಿಗಿರುವ ಪಟ್ಟಣದ ಪುರಸಭೆ ವ್ಯಾಪ್ತಿಯ ಸರಕಾರಿ ಜಾಗೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ಕಟ್ಟಿ ಸಾರ್ವಜನಿಕರ ಸಂಚಾರಕ್ಕೆ ಅಡತಡೆಯನ್ನುಂಟು ಮಾಡುತ್ತಿದ್ದು ಕಾರಣ ಯಾವುದೇ ಮುಲಾಜಿಲ್ಲದೇ ಅಂತಹ ಅಕ್ರಮ ಕಟ್ಟಡಗಳನ್ನು ಪೋಲಿಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಬೇಕು ಎಂದರು.

ಈ ವೇಳೆ ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ ಅವರು ಮಾತನಾಡಿ ಪುರಸಭೆಯ ಆಡಳಿತ ಮಂಡಳಿಯ ಯಾವೋಬ್ಬ ಸದಸ್ಯ ಅಭಿಪ್ರಾಯ ಪಡೆಯದೇ ಬೇಕಾಬಿಟ್ಟಿಯಾಗಿ ಸ್ಲಂ ಇಲ್ಲದ ಬಡಾವಣೆಯಲ್ಲಿರುವ ವ್ಯಕ್ತಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕ ಸಿ ಎಸ್ ನಾಡಗೌಡ ಅವರು ಮಾತನಾಡಿ ಸ್ಲಂ ನಿವಾಸಿಗಳಲ್ಲದವರಿಗೆ ನೀಡಿದ ಹಕ್ಕು ಪತ್ರಗಳನ್ನು ರದ್ದು ಗೊಳಿಸಿ ನಿಜವಾದ ಸ್ಲಂ ನಿವಾಸಿ ಗಳು ಇದ್ದರೆ ಮಾತ್ರ ಅಂತವರಿಗೆ ಹಕ್ಕು ಪತ್ರ ವಿತರಸಿ ನ್ಯಾಯ ಒದಗಿಸಬೇಕು ಎಂದು ಸ್ಲಂ ಬೋರ್ಡ ಇಲಾಖೆ ಅಧಿಕಾರಿ ಪ್ರಹ್ಲಾದ ಪಾಟೀಲ ಸೂಚಿಸಿದರು.

ಜೊತೆಗೆ ಈಗಾಗಲೇ ಪಟ್ಟಣದ ಸುತ್ತಲಿನ ಬಿದರಕುಂದಿ, ಕುಂಟೋಜಿ, ಹಡಲಗೇರಿ, ಶಿರೋಳ ಗ್ರಾಮಗಳನ್ನು ಜಮೀನುಗಳಲ್ಲಿ ಜನರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಸಧ್ಯ ಈಗಿರುವ ಈ ನಾಲ್ಕು ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ನಗರಸಭೆಯನ್ನಾಗಿಸಿಬಹುದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ಹಿನ್ನಲೆಯಲ್ಲಿ ಮುದ್ದೇಬಿಹಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೇಗೆರಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.

Author

error: