ಅಬ್ಬಬ್ಬಾ,, ಪಂಜಾಬ್ ಮಣಿಸಿದ ಹೈದರಾಬಾದ್.. ಕೇವಲ ಎರಡು ರನ್ ಗಳ ವೀರೋಚಿತ ಸೋಲು ಪಂಜಾಬ್ ಗೆ..

ಕೊನೆಗೆ ಪಂಜಾಬ್ ಗಳಿಸಿದ್ದು 180 ರನ್ ಗಳನ್ನು ಮಾತ್ರ. ಎರಡು ರನ್ ಗಳ ಸೋಲು. ಏನೇ ಇರಲಿ ಇದು ವೀರೊಚಿತ ಸೋಲು..

ಪಂಜಾಬ್ ಮತ್ತು ಹೈದರಾಬಾದ್ ನಡುವಿನ ಪಂದ್ಯ. ಅಬ್ಬಬ್ಬ ಈ ಪಂದ್ಯವನ್ನು ವಿಶ್ಲೇಷಿಸಲು ಶಬ್ದಗಳೇ ಇಲ್ಲ. ಪಂಜಾಬ್ ವಿರುದ್ಧ ಹೈದರಾಬಾದ್ ಗೆದ್ದಿದ್ದು ಕೇವಲ 2 ರನ್ ನಿಂದ ! ಗೆಲವು ಅಟ ಆಡಿತು. ಒಮ್ಮೆ ಆ ಕಡೆ ಒಮ್ಮೆ ಈ ಕಡೆ. ಕೊನೆಗೆ ಒಲಿದಿದ್ದು ಹೈದರಾಬಾದ್ ತಂಡಕ್ಕೆ,, ಹೈದರಾಬಾದ್ ನ ವಿಜಯಕ್ಕೆ ಬುನಾದಿ ಹಾಕಿದವರು ನಿತೀಷ್ ರೆಡ್ಡಿ. ಅವರ ಬಿರುಸಿನ ಅರ್ಧ ಶತಕ,,ವ್ಹಾ,,,ವ್ಹಾ,, ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಗಳಿಸಿದ್ದು 182 ರನ್ ಗಳು.

ಇದು ಬೆನ್ನಟ್ಟಲು ಸಾಧ್ಯವಾಗದ ಮೊತ್ತವೇನೂ ಆಗಿರಲಿಲ್ಲ. ಹೈದರಾಬಾದ್ ಗೆ 10 ರಿಂದ 20 ರನ್ ಕಡಿಮೆ ಬಿದ್ದಿರಬಹುದು ಎಂದು ನಿರೀಕ್ಷಿಸಲಾಗಿತ್ತು. ಯಾಕೆಂದರೆ ಕೊನೆಯ ಐದು ಓವರ್ ಗಳನ್ನು ಸರಿಯಾಗಿ ಬಳಸಿಕೊಳ್ಳಲು ಹೈದರಾಬಾದ್ ಗೆ ಸಾಧ್ಯವಾಗಲಿಲ್ಲ.

ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಒಂದು ಹಂತದಕ್ಕೂ ಪಂಜಾಬ್ ಕೇಸರಿಯಂತೆ ಆಡುತ್ತಿತ್ತು. ಆದರೆ ಕೊನೆಗೆ ಗುರಿ ತಲುಪುವಾಗ ಸ್ಪಲ್ಪದರಲ್ಲೇ ಎಡವಿಬಿಟ್ಟಿತು.

ಕೊನೆಯ ಓವರ್ ನಲ್ಲಿ ಪಂಜಾಬ್ ಗೆ ಬೇಕಾಗಿದ್ದುದು 29 ರನ್ ಗಳು. ಪಂದ್ಯ ಕೈ ಬಿಟ್ಟು ಹೋಯಿತು ಎನ್ನುವಾಗಲೇ ಪಂಜಾಬ್ ನ ಅಶುತೋಶ್ ಮತ್ತು ಶಶಾಂಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು ಇನ್ನೇನು ಪಂದ್ಯವನ್ನೇ ಪಂಜಾಬ್ ಗೆದ್ದೇ ಬಿಟ್ಟೀತು ಎನ್ನುವಾಗ ಎಡವಟ್ಟು.

ಕೊನೆಗೆ ಪಂಜಾಬ್ ಗಳಿಸಿದ್ದು 180 ರನ್ ಗಳನ್ನು ಮಾತ್ರ. ಎರಡು ರನ್ ಗಳ ಸೋಲು. ಏನೇ ಇರಲಿ ಇದು ವೀರೊಚಿತ ಸೋಲು..

Author

error: