ಜಿಯೊಂಗಿ ನವೋದ್ಯಮ ಶೃಂಗಸಭೆ ; ರಾಜ್ಯದ ನವೋದ್ಯಮಗಳಿಗೆ ಆಹ್ವಾನ

South Korean Collaborate Boost Startup Ecosystems: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿಯೊಂಗಿ ನವೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಕಿಮ್‌ ಅವರು ಆಹ್ವಾನ ನೀಡಿದರು.

ಬೆಂಗಳೂರು: ಬೆಂಗಳೂರು ಬಳಿ ಅಸ್ತಿತ್ವಕ್ಕೆ ಬರಲಿರುವ ಜ್ಞಾನ, ಆರೋಗ್ಯ, ಆವಿಷ್ಕಾರ ಮತ್ತು ಸಂಶೋಧನಾ ನಗರದ (ಕೆಎಚ್‌ಐಆರ್‌ ಸಿಟಿ) ಅಭಿವೃದ್ಧಿಗೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಜಿಯೊಂಗಿ ಪ್ರಾಂತ್ಯದ ಜೊತೆಗಿನ ಸಹಯೋಗದ ಸಾಧ್ಯತೆಗಳ ಬಗ್ಗೆ ರಾಜ್ಯದ ನಿಯೋಗವು ಗುರುವಾರ ಫಲಪ್ರದ ಸಮಾಲೋಚನೆ ನಡೆಸಿತು.

ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಜಿಯೊಂಗಿ ಪ್ರಾಂತ್ಯದ ಉಪ ರಾಜ್ಯಪಾಲ ಹಿಯುನ್‌ ಗೊನ್‌ ಕಿಮ್‌ ಅವರನ್ನು ಭೇಟಿಯಾಗಿತ್ತು.

ʼಎಲೆಕ್ಟ್ರಾನಿಕ್ಸ್‌, ಸ್ಟಾರ್ಟ್‌ಅಪ್‌, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್ಡಿ) , ಜೈವಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ವಿಪುಲ ಅವಕಾಶಗಳು ಇವೆʼ ಎಂದು ಸಚಿವ ಪಾಟೀಲ ಅವರು ಕಿಮ್‌ ಅವರ ಗಮನಕ್ಕೆ ತಂದರು.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿಯೊಂಗಿ ನವೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಕಿಮ್‌ ಅವರು ಆಹ್ವಾನ ನೀಡಿದರು.

ಭಾರತದ ಸಿಲಿಕಾನ್‌ ಕಣಿವೆ ಖ್ಯಾತಿಯ ಬೆಂಗಳೂರು ಮತ್ತು ಕೊರಿಯಾದ ಸಿಲಿಕಾನ್‌ ಕಣಿವೆ ಖ್ಯಾತಿಯ ಪ್ಯಾಂಗೊ ಟೆಕ್ನೊ ವ್ಯಾಲಿ ನಡುವೆ ವಾಣಿಜ್ಯ ಬಾಂಧವ್ಯ ವೃದ್ಧಿಸಲು ನಿರ್ಧರಿಸಲಾಯಿತು.

ಸೋಲ್‌ ಮೆಟ್ರೊಪಾಲಿಟನ್‌ ಸರ್ಕಾರದ ಆರ್ಥಿಕ ನೀತಿಯ ಉಪ ಮೇಯರ್‌ ಲೀ ಹೆ ವೊ ಅವರ ಜೊತೆಗಿನ ಭೇಟಿಯಲ್ಲಿ ಹಣಕಾಸು, ಹೂಡಿಕೆ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೊರಿಯಾದ ಕಂಪನಿಗಳಿಗೆ ರಾಜ್ಯ ಸರ್ಕಾರ ಒದಗಿಸಲಿರುವ ಸೌಲಭ್ಯಗಳನ್ನು ವಿವರಿಸಲಾಗಿದೆ.

ರಾಜ್ಯದಲ್ಲಿ ತನ್ನ ಹಣಕಾಸು ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಕೆಇಬಿ ಹನಾಬ್ಯಾಂಕ್‌ ತಿಳಿಸಿದೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

Author

error: