ಬೆಳಗಾವಿಗೆ ರೈತರು ಬಂದರು ದಾರಿ ಬಿಡಿ; ಅವರ ಕೂಗಿಗೆ ಕಿವಿ ಕೊಡಿ. ಇಲ್ಲದಿದ್ದರೆ ಅವರ ಸಿಟ್ಟು ನಿಮ್ಮನ್ನು ಸುಟ್ಟು ಹಾಕೀತು..!

ಬೆಳಗಾವಿ : ಬೆಳಗಾವಿಯಲ್ಲಿ ರೈತರ ಪ್ರತಿಭಟನೆ.. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ. ಎಲ್ಲಿ ನೋಡಿದರೂ ಹಸಿರು ಶಾಲಿನ ಮೆರವಣಿಗೆ. ಆದರೆ ರಾಜಕಾರಣಿಗಳಿಗೆ ಚುನಾವಣೆಯ ಗಡಿಬಿಡಿ. ರೈತರ ಮಾತು ಕೇಳಲು ಅವರಿಗೆ ಸಮಯವಿಲ್ಲ..

ಜಿಲ್ಲೆಯ ರೈತರು ಮತ್ತು ವಿವಿಧ ಮಠಾಧೀಶರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಬರಗಾಲದ ಪರಿಹಾರ ನೀಡಬೇಕು, ಸಾಲ ಮನ್ನಾ ಮಾಡಬೇಕು, ಘಟಪ್ರಭಾ ನದಿಯಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಮುಖ್ಯವಾಗಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು. ಇದು ರೈತರ ಒತ್ತಾಯ.

ರೈತರು ಹೋರಾಟ ಮಾಡುವ ವಿಚಾರ ತಿಳಿದು ಡಿಸಿ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ಯಾರು ಒಳ ಬಾರದಂತೆ ತಡೆ ಹಿಡಿಯಲಾಗಿತ್ತು. ಇದನ್ನು ಗಮನಿಸಿದ ರೈತರು ಆಕ್ರೋಶಗೊಂಡು ಬ್ಯಾರಿಕೇಡ್ ತಳ್ಳಿ ಗೇಟ್ ಹಾರಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ಉಂಟಾಯಿತು. ಇದೇ ವೇಳೆ ಡಿಸಿಪಿ ರೋಹನ್ ಜಗದೀಶ್ ರೈತರನ್ನು ತಳ್ಳಿದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ರೈತರು ಕಚೇರಿ ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಾಲಮನ್ನಾ ಮಾಡಲು ಸುಗ್ರವಾಜ್ಞೆ ಹೊರಡಿಸುವಂತೆ ರೈತರು ಪಟ್ಟು ಹಿಡಿದರು. ಆಗ ಇದು ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂಬ ಭರವಸೆ ದೊರಕಿತು.. ಬ್ಯಾಂಕ್​ಗಳಿಂದ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿ್ದೆ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

.

Author

error: