ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ ಡ್ರೈವ್ ಮೊದಲು ಸಿಕ್ಕಿದ್ದು ವಕೀಲ ದೇವರಾಜೇ ಗೌಡರಿಗೆ. ರೇವಣ್ಣ ಕುಟುಂಬದ ಕಡು ವೈರಿ ಎಂದು ನಂಬಲಾದ ನ್ಯಾಯವಾದಿ. ಇವರು ೬ ತಿಂಗಳುಗಳ ಕಾಲ ಈ ಪೆನ್ ಡ್ರೈವ್ ಹಾಗೆ ಇಟ್ಟುಕೊಂಡಿದ್ದು ಯಾಕೆ ? ಪ್ರಕರಣವನ್ನು ದಾಖಲಿಸದೇ ಯಾಕೆ ಅವರು ಸುಮ್ಮನಿದ್ದುದು ಯಾಕೆ ?
ಈ ಪೆನ್ ಡ್ರೈವ್ ಇಟ್ಟುಕೊಂಡು ಪತ್ರಿಕಾಗೋಷ್ಟಿ ಮಾಡಿದರು. ತಮ್ಮ ಬಳಿ ಲೈಂಗಿಕ ವೀಡಿಯೋ ಇದೆ ಎಂದು ಘೋಷಿಸಿದರು. ಹಾಗೆ ಬಿಜೆಪಿ ನಾಯಕರಿಗೆಲ್ಲ ಪತ್ರ ಬರೆದರು. ಆದರೆ ಪ್ರಜ್ವಲ್ ಮೇಲೆ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮ ವನ್ನು ಕೈಗೊಳ್ಳಲೇ ಇಲ್ಲ.
ಈ ನಡುವೆ ತಮ್ಮ ವೈಯಕ್ತಿಕ ಬದುಕಿನ ದುರಂತ ಮತ್ತು ಇದಕ್ಕೆ ಕಾರಣ ರೇವಣ್ನ ಕುಟುಂಬ ಎಂದು ಆರೋಪ ಮಾಡಿದರು. ತಾಮ್ಮ ಹೆಂಡತಿ ತಮ್ಮ ಜೊತೆ ಇಲ್ಲ, ಮಕ್ಕಳನ್ನು ನಾನೇ ಬೆಳಸಿದ್ದೇನೆ ಎಂದು ಇಡೀ ಕಥೆಗೆ ಬೇರೆ ತಿರುವು ನೀಡಲು ಯತ್ನಿಸಿದರು.
ದೇವರಾಜೇಗೌಡರು ಬಯಸಿದ್ದರೋ ಇಲ್ಲವೋ ಅವರು ಪೆನ್ ಡ್ರೈವ್ ವಿಚಾರದಲ್ಲಿ ಕ್ರಮ ಕೈಗೊಳ್ಖದಿದ್ದರೂ ಅದು ಬಹಿರಂಗವಾಯಿತು, ಹಾಸನದ ಗಲ್ಲಿ ಗಲ್ಲಿ ಗಳಲ್ಲಿ ಪೆನ್ ಡ್ರೈವ್ ಹರಿದಾಡತೊಡಗಿತು. ಕೊನೆಗೆ ಸರ್ಕಾರ ಈ ಬಗ್ಗೆ ತನಿಖೆಗೆ ಎಸ್ ಐ ಟಿ ನೇಮಿಸಿ ಬಿಟ್ಟಿತು. ಇದು ದೇವರಾಜೇ ಗೌಡರ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ ಆಗಿತ್ತು ಅನ್ನಿಸುತ್ತದೆ. ಯಾಕೆಂದರೆ ಇದಾದ ಮೇಲೆ ದೇವರಾಜೇ ಗೌಡರ ಮಾತಿನ ದಾಟಿ ಬದಲಾಯಿತು. ಅದುವರೆಗೆ ರೇವಣ್ಣ ಕುಟುಂಬದ ಮೇಲೆ ದಾಳಿ ನಡೆಸುತ್ತಿದ್ದ ಅವರು ದಿಡೀರ್ ಆಗಿ ಜೆ ಡಿಎಸ್ ಬೆಂಬಲಿಗರಂತೆ ಕಾಣತೊಡಗಿದರು.. ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿಕೊಂಡರು.
ಎಲ್ ಆರ್ ಶಿವರಾಮೇಗೌಡರನ್ನು ಹಿಡಿದುಕೊಂಡು ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರನ್ನು ಬಲೆಗೆ ಕೆಡವಲು ತಂತ್ರ ರೂಪಿಸಿದರು. ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಅದನ್ನು ರಿಕಾರ್ಡ್ ಮಾಡಿಕೊಂಡರು.
ಅಷ್ಟರಲ್ಲಿ ಅವರು ಟೋಪಿ ತಿರುಗಿ ಹಾಕಿ ಯಾಗಿತ್ತು ಯಾಕೆ ? ಜೊತೆಗೆ ತಮ್ಮ ಬಳಿ ೮೦ ಕೋಟಿ ರೂಪಾಯಿ ಆಸ್ತಿ ಇದೆ ಎಂದು ಹೇಳಿಕೊಂಡು ಬರತೊಡಗಿದರು..
ಈಗ ಬಹಿರಂಗವಾದ ವಿಚಾರ ಏಪ್ರಿಲ್ ೧ ರಂದು ಅವರ ವಿರುದ್ಧ ಹೊಳೇನರಸಿಪುರದಲ್ಲಿ ದಾಖಲಾದ ಪ್ರಕರಣ. ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣ ಇದು. ಈ ಮಹಿಳೆ ಈಗಾಗಲೇ ಸುದ್ದಿ ವಾಹ್ನಿಯೊಂದಕ್ಕೆ ಬಂದು ಗೌಡರ ವಿರುದ್ಧ ಹಲವು ಆರೋಪವನ್ನು ಮಾಡಿದ್ದಾರೆ.
ಈಗಿನ ಕುತೂಹಲ ದೇವರಾಜೇ ಗೌಡರು ಸಡನ್ ಆಗಿ ಬದಲಾಗಿದ್ದು ಹೇಗೆ ? ರೇವಣ್ನ ನವರ ಮೇಲಿನ ಸಿಟ್ಟನ್ನು ಬಿಟ್ಟು ಅವರ ಜೊತೆ ಒಪ್ಪಂದಕ್ಕೆ ಅವರು ಮುಂದಾದರಾ ? ಇದರ ಹಿಂದಿರುವವರು ಯಾರು ? ಬಿಜೆಪಿ ನಾಯಕತ್ವ ದೇವರಾಜೇಗೌಡರನ್ನು ಬದಲಿಸಿತಾ ? ಇಡೂ ಪ್ರಕರಣದ ದಾರಿ ತಪ್ಪಿಸಲು ತಂತ್ರ ರೂಪಗೊಂಡಿತಾ ?
ಇದೆಲ್ಲ ಆದ ಮೇಲೆ ಕಟ್ಟ ಕೊನೆಯ ಪ್ರಶ್ನೆ ದೇವರಾಜೇ ಗೌಡರು ನಾಯಕರಾ ಖಳನಾಯಕರಾ ?
.
