ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವೀಡಿಯೂ ಹೊರಕ್ಕೆ ಬಂದಿದ್ದು ಹೇಗೆ ? ಈ ಪ್ರಶ್ನೆಯ ಬೆನ್ನು ಹತ್ತಿ ಹೊರಟರೆ ಸಿಗುವುದು ರೋಚಕ ಕಥೆ. ಅವರ ಕುಟುಂಬದ ಆಸ್ತಿ ವ್ಯವಹಾರ, ಸಿಬ್ಬಂದಿಗಳನ್ನು ಅವರು ನೋಡಿಕೊಳ್ಳುವ ರೀತಿ ಎಲ್ಲವೂ ಬಹಿರಂಗವಾಗುತ್ತದೆ.
ಈ ಸೆಕ್ಸ್ ವೀಡಿಯೂವನ್ನು ಪ್ರಜ್ವಲ್ ಅವರೇ ಮಾಡಿ ತಮ್ಮ ಲಾಪ್ ಟಾಪ್ ನಲ್ಲಿಇಟ್ಟುಕೊಂಡಿದ್ದರು ಎಂಬುದು ಒಂದು ವಾದ. ಇಲ್ಲ ಇನ್ನೊಬ್ಬರು ಮಾಡಿ ಇಟ್ಟುಕೊಂಡಿದ್ದರು ಎಂಬುದು ಇನ್ನೊಂದು ವಾದ.
ಇದು ಏನೇ ಇರಲಿ ಈ ವೀಡಿಯೋ ಹೊರಕ್ಕೆ ಬರಲು ಕಾರಣ ಮಾತ್ರ ಅವರ ಜೊತೆಗೆ ಹಲವು ವರ್ಷಗಳಿಂದ ಇದ್ದ ವಾಹನ ಚಾಲಕ. ಇದನ್ನು ಹೊಳೇನರಿಸಿಪುರದ ವಕೀಲ ದೇವರಾಜೇಗೌಡರೂ ಹೇಳುತ್ತಾರೆ. ಅವರ ಪ್ರಕಾರ ಈ ವಾಹನ ಚಾಲಕನೇ ಈ ಪ್ರಕರಣವನ್ನು ಬಹಿರಂಗಪಡಿಸಿ ಪ್ರಜ್ವಲ್ ಪಾಲಿಗೆ ಖಳನಾಯಕನಾದ. ಇದಕ್ಕೆ ಕಾರಣ ಭೂ ವ್ಯವಹಾರ.
ಈ ಚಾಲಕನ ಹೆಸರಿನಲ್ಲಿದ್ದ ೧೩ ಎಕರೆ ಭೂಮಿ. ಅರಸೀಕೆರೆ ಸಮೀಪದಲ್ಲಿ ಇದ್ದ ಈ ಭೂಮಿ ಈ ಚಾಲಕನ ಹೆಸರಿನಲ್ಲಿ ಇತ್ತು. ಅದನ್ನು ತಮಗೆ ಬರೆದುಕೊಡುವಂತೆ ಪ್ರಜ್ವಲ್ ಒತ್ತಡ ಹೇರಿದರು. ಆತ ಬರೆದುಕೊಡಲಿಲ್ಲ. ನಂತರ ಕಿಡ್ನಾಪ್ ಕೂಡ ನಡೆಯಿತು ಎಂಬ ಆರೋಪವಿದೆ. ಈ ಆರೋಪ ಏನೇ ಇರಲಿ. ಸುಮಾರು ೧೦ ವರ್ಷಗಳಿಂದ ಪ್ರಜ್ವಲ್ ಜೊತೆ ಇದ್ದ ಚಾಲಕ ಕೆಲಸ ಬಿಟ್ಟು ಹೊರಟು ಹೋದ..
ಇದಾದ ಮೇಲೆ ಪ್ರಾರಂಭವಾದದ್ದು ದ್ವೇಷದ ಕಥೆ..
ಆತ ದೇವರಾಜೇ ಗೌಡರನ್ನು ನೊಡಿದ. ವಕೀಲರಾಗಿರುವ ಅವರಿಗೆ ತನ್ನ ಪ್ರಕರಣವನ್ನು ತೆಗೆದುಕೊಳುವಣ್ತೆಯೂ ಮನವಿ ಮಾಡಿದ.. ದೇವೇರಾಜೇ ಗೌಡರಿಗೆ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿದ ಎಚ್.ಡಿ. ರೇವಣ್ನ ಅವರ ಕುಟುಂಬದ ಮೇಲೆ ಸಿಟ್ಟಿತ್ತು.
ಈ ನಡುವೆ ಈ ವಾಹನ ಚಾಲಕ ಡಿ.ಕೆ.ಶಿವಕುಮಾರ್ ಮತ್ತು ಡಿ. ಕೆ.ಸುರೇಶ್ ಅವರನ್ನು ಭೇಟಿ ಮಾಡಿದ್ದ. ಅವರಿಗೂ ಈ ವೀಡಇಯೋ ಪೆನ್ ಡ್ರೈವ್ ನೀಡಿದ್ದ. ಆದರೆ ಅವರು ತಕ್ಷಣ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಆತ ಮತ್ತೊಮ್ಮೆ ದೇವೇರಾಜೇ ಗೌಡರ ಬಳಿ ಬಂದಿದ್ದ.ಕೇಸು ಮಾಡುವುದು ಅವನ ಉದ್ದೇಶವಾಗಿತ್ತು.
ಈ ವಿಚಾರದ ಬಗ್ಗೆ ಮಾತನಾಡಿರುವ ವಕೀಲ ದೇವರಾಜೇ ಗೌಡ, ಎಲ್ಲರಿಗಿಂತ ಮೊದಲು ಈ ವಿಡಿಯೋ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಕೈಸೇರಿಯಾಗಿತ್ತು ಎಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ? ಗೊತ್ತಿಲ್ಲ.
ದೇವರಾಜೇಗೌಡ ಮಾಧ್ಯಮಗಳಿಗೆ ತಿಳಿಸಿದ ಇನ್ನೂ ಕೆಲವು ವಿಚಾರಗಳು:
ಕಾರ್ತಿಕ್ ಎನ್ನುವ ವ್ಯಕ್ತಿ ವಕಾಲತ್ ಹಾಕಲು ನನ್ನ ಬಳಿ ಬಂದಿದ್ದ, ವಿಡಿಯೋ ಸಿಡಿ ಬಗ್ಗೆ ಪ್ರಜ್ವಲ್ ರೇವಣ್ಣ ಸ್ಟೇ ತಂದಿದ್ದಾರೆ ಇದಕ್ಕೆ ನಾನು ತಕರಾರು ಅರ್ಜಿ ಸಲ್ಲಿಸಬೇಕು ಎಂದು ಹೇಳಿದ. ಸುಮ್ಮನೆ ತಕರಾರು ಹಾಕಲು ಸಾಧ್ಯವಿಲ್ಲ, ಸಿಡಿಯಲ್ಲಿ ಏನಿದೆ ನೋಡೋಣ ಎಂದಾಗ ಕಾರ್ತಿಕ ಪೆನ್ ಡ್ರೈವ್ ತೆಗೆದುಕೊಂಡು ಬಂದ, ನಾವು ಅದನ್ನು ವೀಕ್ಷಿಸಿದೆವು.
” ಪೆನ್ ಡ್ರೈವ್ ನೋಡಿದಾಗ ಅದು ಬಹಳ ಅಶ್ಲೀಲವಾಗಿತ್ತು, ಆಗ ನಾನು ಅವನನ್ನು ಕೇಳಿದೆ ಇದನ್ನು ಯಾರಿಗಾದರೂ ಕೊಟ್ಟಿದೆಯಾ ಎಂದು. ಅದಕ್ಕೆ ಅವನು ಕಾಂಗ್ರೆಸ್ ನಾಯಕರು ಇದನ್ನು ತೆಗೆದುಕೊಂಡು ಬಿಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಬಳಿ ಇದು ಈಗಾಗಲೇ ಹೋಗಿಯಾಗಿದೆ ಎಂದು ಅವನು ಹೇಳಿದಾಗ ನನಗೆ ಭಯವಾಯಿತು ” ಎಂದು ವಕೀಲರಾದ ದೇವರಾಜೇ ಗೌಡ ಅಂದಿನ ವಿದ್ಯಮಾನವನ್ನು ವಿವರಿಸಿದ್ದಾರೆ.
