ಬೆಂಗಳೂರು : ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ ಕನ್ನಡಿಗರ ಸಂಖ್ಯೆ ದೊಡ್ದದು. ಅಲ್ಲಿ ಕನ್ನಡಿಗರ ಕಾಲೋನಿಗಳೇ ಇವೆ. ಆದರೆ ಆಗಾಗ ಕನ್ನಡಿಗರ ಮನೆಗಳನ್ನು ಉರುಳಿಸುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡುತ್ತಿದೆ.

ಈಗ ಗೋವಾದಲ್ಲಿ ಸುಮಾರು 22 ಕನ್ನಡಿಗರ ಮನೆಗಳು ಅಕ್ರಮ ಎಂದು ಗೋವಾ ಸರ್ಕಾರ ಉರುಳಿಸಿದ ವರದಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಸ್ಥಳಾಂತರಗೊಂಡ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋವಾ ಬಿಜೆಪಿ ವಕ್ತಾರ ಗಿರಿರಾಜ್ ಪೈ ವೆರ್ಣೆಕರ್, ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಉದ್ದಟತನ ಪ್ರದರ್ಶಿಸಿದ್ದಾರೆ, ಹಾಗಿದ್ದರೆ ಗೋವಾದಲ್ಲಿ ಕನ್ನಡಿಗರ ಮನೆ ಕೆಡುವುದರ ಬಗ್ಗೆ ನೀವು ಕರ್ನಾಟಕ ರಾಜಕಾರಣದಲ್ಲಿ ಯಾಕೆ ತಲೆ ಹಾಕುತ್ತೀರಿ ಎಂದು ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಪ್ರಶ್ನಿಸಬೇಕಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವವರು ಇದೇ ಪ್ರಮೋದ್ ಸಾವಂತ್.. ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ಅಂಗಳಕ್ಕೆ ತಂದು ನಿಲ್ಲಿಸಿದವರೂ ಸಾವಂತ್. ಹಾಗೆ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ದಿನ ಮಂಡ್ಯಕ್ಕೇ ಬಂದ ಮಹಾತ್ಮ ಇವರೇ.
ನಮ್ಮ ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಾವಂತ್ ಅಲ್ಲಿನ ಕನ್ನಡಿಗರ ಮನೆಗಳನ್ನು ನೆಲ ಸಮ ಮಾಡುತ್ತಿದ್ದಾರೆ. ಗೋವಾದ ಸಂಗೋಲ್ದಾದಲ್ಲಿ ಹಲವಾರು ಕನ್ನಡಿಗ ಕುಟುಂಬಗಳು ತಮ್ಮ ಮನೆ ಕಳೆದುಕೊಂಡಿದ್ದಾರೆ.

Author

Leave a Reply

Your email address will not be published. Required fields are marked *