Suddi Tv

Suddi Tv

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ದಿ ಬಿಗ್ ಬಾದ್‌ಶಾ’ ರೆಸ್ಟೋರೆಂಟ್ ಉದ್ಘಾಟನೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೃದಯ ಭಾಗದಲ್ಲಿ ಹೊಸ ಪಾಕಶಾಲೆಯೊಂದು  ಉದ್ಘಾಟನೆಗೊಂಡಿದ್ದು, ನಗರದ ಆಹಾರ ಪ್ರಿಯರಿಗ ಹೊಸ ರುಚಿಯ ಅನುಭವ ನೀಡುವ ಭರವಸೆ ನೀಡಿದೆ. ಉದ್ಯಮಿ, ರೆಸ್ಟೋರೆಂಟ್ ಮಾಲೀಕ ಉದಯ ಮೊಗವೀರ ದೃಷ್ಟಿಯಲ್ಲಿ, ದಿ ಬಿಗ್ ಬಾದ್‌ಶಾಹ್ ಕೇವಲ ರೆಸ್ಟೋರೆಂಟ್ ಅಲ್ಲ; ಇದು ಪಾಕಶಾಲೆಯ ಶ್ರೇಷ್ಠತೆ ಮತ್ತು ಆತಿಥ್ಯಕ್ಕಾಗಿ ಸಾಕ್ಷಿಯಾಗಿದೆ. ಆತಿಥ್ಯ ಉದ್ಯಮದಲ್ಲಿ ವರ್ಷಗಳ ಅನುಭವ ಮತ್ತು…

ಕಾಂಗ್ರೆಸ್ ಸಂಪರ್ಕದಲ್ಲಿ ಮಾಧುಸ್ವಾಮಿ; ಕೈ ಹಿಡಿಯುತ್ತಾರೆಯೆ ಹಿರಿಯ ನಾಯಕ ?

J C Madhuswamy: ಈ ನಡುವೆ ಕಾಂಗ್ರೆಸ್ ಪಕ್ಷ ಮಾಧು ಸ್ವಾಮಿ ಅವರ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಧು ಸ್ವಾಮಿ ಅವರಿಗೆ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರ್ತಪೇಟೆ ಘಟನೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ

ಬೆಂಗಳೂರು : ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ. ಇದು ಪೋಲೀಸರು ನೀಡಿದ ಸ್ಪಷ್ಟನೆ . ನಗರದ ನಗರತಪೇಟೆಯಲ್ಲಿ ಹನುಮಾನ್ ಜಾಲೀಸಾ ಹಾಕಿದ್ದಕ್ಕೆ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ…

ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಯುತ್ತದೆ – ವಿಜಯೇಂದ್ರ

ಬಿಜೆಪಿ ಜೆಡಿಎಸ್ ಮೈತ್ರಿಯ ನಡುವೆ ಸಮಸ್ಯೆ ಉಂಟಾಗುತ್ತಿದ್ದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಅಂತಹ ಸಮಸ್ಯೆ ಏನೂ ಇಲ್ಲ. ಸಣ್ನ ಪುಟ್ಟ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಎರಡೂ ಪಕ್ಷಗಳ ನಾಯಕರು ನಿನ್ನೆ ಮಾತನಾಡಿದ್ದಾರೆ. ಸಮಸ್ಯೆ ಬಗೆ ಹರಿಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮಂಡ್ಯದಿಂದ ಸ್ಪರ್ಢಿಸಲು ಕುಮಾರಸ್ವಾಮಿ ನಿರ್ಧಾರ ?

ಬೆಂಗಳೂರು : ಟಿಕೆಟ್ ಹಂಚಿಕೆಯ ಸಮಸ್ಯೆಯ ನಡುವೆಯೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಕಾರ್ಯಕರ್ತರ ಒತ್ತಡ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಮಾರಸ್ಚಾಮಿ ತಾವೇ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಂಡ್ಯ ಮತ್ತು ಹಾಸನ ಎರಡು ಕ್ಷೇತ್ರಗಳನ್ನು ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ…

ಕಾಂಗ್ರೆಸ್ ಬಿಜೆಪಿಯಲ್ಲಿ ಟಿಕೆಟ್ ಕಗ್ಗಂಟು; ಇಂದು ಸಿಇಸಿ ಸಭೆ

ನವದೆಹಲಿ: ಬಿಜೆಪಿ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಇನ್ನಷ್ಟು ಕಗ್ಗಂಟಾಗಿದೆ. ಇಂದು ಎರಡೂ ಪಕ್ಷಗಳ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.. ಆದರೆ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಬಿದಿಗೆ ಇಳಿದಿದ್ದಾರೆ. ಪ್ರತಿಭಟನೆಗಳು ನಡೆಯುತ್ತಿವೆ..ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇರುವ ಕ್ಷೇತ್ರಗಳು ಹಲವು. ಜೊತೆಗೆ ಹಲವು ಸಚಿವರ…

ಮಂಡ್ಯ:ದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ವಶ !

ಮದ್ದೂರು ತಾಲೂಕಿನ ನಿಡಘಟ್ಟ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ.

ಕಮಲದ ಸ್ನೇಹ ಮಾಡಿರುವ ತೆನೆ ಹೊತ್ತ ಮಹಿಳೆ ಈಗ ಅತಂತ್ರ : ಮೋದಿ ಶಾ ಹೊಡೆತದಿಂದ ಕಂಗೆಟ್ಟ ಜೆಡಿಎಸ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇವಲ ಎರಡು ಸ್ಥಾನಕ್ಕಾಗಿ ಇಷ್ಟೆಲ್ಲ ಹೊರಾಟ ಮಾಡಬೇಕಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ ಎಂಬುದು ಅವರ ಆರೋಪ. ಜೆಡಿಎಸ್ ವರಿಷ್ಟ ಎಚ್. ಡಿ. ದೇವೇಗೌಡರು ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ…

ಇನ್ನು ಮೇಲೆ ಸರ್ಕಾರಿ ಕಚೇರಿಗಳು 5 ದಿನ ಮಾತ್ರ ತೆರೆದಿರುತ್ತವೆ!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಯ ಜೊತೆಗೆ ಮತ್ತೊಂದು ಶುಭ ಸುದ್ದಿ. 7ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ, ಎರಡು ದಿನ ರಜೆ ಇರುವ ಪದ್ಧತಿ ಜಾರಿಗೆ ಅಸ್ತು ಎಂದಿದೆ. ಇದು ನೌಕರರ ಬಹುದಿನದ ಬೇಡಿಕೆಯಾಗಿತ್ತು. ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಾರದಲ್ಲಿ 5 ದಿನ…

ಕೇಸರಿ ಮಿತ್ರರ ಬಗ್ಗೆ ಜೆಡಿಎಸ್ ಮುನಿಸು- ಕೋಲಾರದ ಕಗ್ಗಂಟು

ಜೆಡಿಎಸ್ ಎಂಬ ಮಾಜಿ ಜಾತ್ಯಾತೀತ ಪಕ್ಷ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆಯ ಸಮಸ್ಯೆ ಉಂಟಾಗಿದೆ. ಎಲ್ಲ ಸರಿಯಾಗಿ ಆಯಿತು ಎಂದುಕೊಳ್ಳುವಾಗಲೇ ಕೋಲಾರ ಕಗ್ಗಂಟು ಸಮಸ್ಯೆಯನ್ನು ಸೃಷ್ಟಿಸಿದೆ.. ಇತ್ತೀಚಿನ ವರದಿಯ ಪ್ರಕಾರ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಜೆಡಿಎಸ್ ಗೆ ಕೋಲಾರ ಬೇಕೇ ಬೇಕು…ಕೋಲಾರದಲ್ಲಿ ಈಗ ಬಿಜೆಪಿ ಸಂಸತ್ ಸದಸ್ಯರಿದ್ದಾರೆ. ಜೊತೆಗೆ ಬಿಜೆಪಿಯ…

error: