BTV ಕಂಪೆನಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ ; ಪತ್ರಕರ್ತ ಜಿ ಎಂ ಕುಮಾರ್ ಜಾಮೀನು ರದ್ದು, ಬಂಧನಕ್ಕೆ ಆದೇಶ

JOURNALIST GM Kumar : ಆರೋಪಿಯನ್ನು ತಕ್ಶಣ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸಿಸಿಬಿ ಪೋಲೀಸರಿಗೆ ಕೋರ್ಟ್ ಆದೇಶಿಸಿದೆ.

ಬೆಂಗಳೂರು : ಬಿಟಿವಿ ಕಂಪೆನಿಯ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪತ್ರಕರ್ತ ಜೆ.ಎಂ. ಕುಮಾರ್ ಅವರಿಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದು ಪಡಿಸಿದೆ.

ಆರೋಪಿಯನ್ನು ತಕ್ಶಣ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸಿಸಿಬಿ ಪೋಲೀಸರಿಗೆ ಕೋರ್ಟ್ ಆದೇಶಿಸಿದೆ.

ಜಿ.ಎಂ. ಕುಮಾರ್ ಅವರಿಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಬಿಟೀವಿ ಮೂಲ ಒಡೆತನ ಹೊಂದಿರುವ ಈಗಲ್ ಸೈಟ್ ಮೀಡಿಯಾ ಸಂಸ್ಥೆಯ ನಿರ್ದೇಶಕ ಅಶ್ವಿನ್ ಮಹೇಂದ್ರ ಹೈಕೋರ್ಟನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಕುಮಾರ್ ಅವರಿಗೆ ನೀಡಲಾಗಿದ್ದ ಜಾಮೀನನನ್ನು ರದ್ದು ಪಡಿಸಿತು.
ಆರೋಪಿಯ ಬಂಧನದ ಬಗ್ಗೆ ಕೈಗೊಳ್ಳಲಾದ ಕ್ರಮದ ವರದಿಯನ್ನು ತನಿಖಾಧಿಕಾರಿಯು ವಿಜಯ ನಗರ ಪೊಲೀಸರು ಮತ್ತು ಸಿಸಿಬಿಗೆ ನೀಡಬೇಕು ಎಂದು ನ್ಯಾಯಾಲಯ ಸೂಚಿ಼ಸಿದೆ,

ಬಿಟಿವಿ ಮಾತೃ ಸಂಸ್ಥೆ ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂಡ ಕೋಟ್ಯಾಂತರ ರೂಪಾಯಿ ವರ್ಗಾವಣೆ ಮಾಡಿದ ಆರೋಪದ ಮೇಲೆ 2022 ರಲ್ಲಿ ವಿಜಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Author

error: