ಮಹದಾಯಿ ನಮ್ಮ ಜೀವನದಿ ; ಕರ್ನಾಟಕಕ್ಕೆ ಚುನಾವಣಾ ವಿಚಾರ ಮಾತ್ರ ; ಕರ್ನಾಟಕ ಬಿಜೆಪಿ ಆತ್ಮ ಗೋವಾ ಸಿಎಂ ಪ್ರಮೋದ್ ಸಾವಂತ್

Goa CM Pramod Sawant : ಕರ್ನಾಟಕದ ಜನರಿಗೆ ಮಹದಾಯಿ ಚುನಾವಣಾ ವಿಚಾರ ಮಾತ್ರ.ಆದರೆ ನಮಗೆ ಮಹಾದಾಯಿ ಜೀವನದಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಬೆಂಗಳೂರು : ಕರ್ನಾಟಕ ಬಿಜೆಪಿಯ ಆತ್ಮ, ಬಿಜೆಪಿ ಜೆಡಿಎಸ್ ಮೈತ್ರಿಯ ರೂವಾರಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಅವರು ಕರ್ನಾಟಕದ ಉಸ್ತುವಾರಿಯಂತೆ ಕೆಲಸ ಮಾಡುತ್ತಿದ್ದಾರೆ.

ಇಂದು ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿದ್ದರು. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಜೊತೆ ರೋಡ್ ಶೋ ನಡೆಯಿತು. ನಂತರ ಮಾಧ್ಯಮ ಒಂದರ ಜೊತೆ ಮಾತನಾಡುತ್ತ ಅವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿದರು.

ಕರ್ನಾಟಕದ ಜನರಿಗೆ ಮಹದಾಯಿ ಚುನಾವಣಾ ವಿಚಾರ ಮಾತ್ರ. ನಮಗೆ ಮಹಾದಾಯಿ ಜೀವನದಿ… ಈ ಹೇಳಿಕೆ ಕನ್ನಡಿಗರ ಕರ್ನಾಟಕದ ರಾಜಕಾರಣಿಗಳ ಕನ್ನಡ ಪ್ರೇಮವನ್ನು ಪ್ರಶ್ನಿಸುವಂತಿತ್ತು. ಈ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು, ಜೆಡಿಎಸ್ ನಾಯಕರು ಉತ್ತರಿಸುವ ಧೈರ್ಯವನ್ನಾದರೂ ತೋರಿಸಬಹುದೆ ? ಗೊತ್ತಿಲ್ಲ.

ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾವಂತ್ ಅವರು ಬುಧವಾರ ಬೆಳಗಾವಿಗೆ ಆಗಮಿಸಿದ್ದರು.

ಈ ವೇಳೆ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೊಮ್ಮೆ ಭಾರಿ ಗೆಲುವು ತಂದುಕೊಡುವಲ್ಲಿ ‘ಮೋದಿ ಅಂಶ’ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹದಾಯಿ ಮೇಲಿನ ನಮ್ಮ ಹಕ್ಕನ್ನು ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಒಂದು ಹನಿ ಮಹದಾಯಿ ನೀರನ್ನು ಬೇರೆ ರಾಜ್ಯಗಳಿಗೆ ಹರಿಸುವುದನ್ನು ಗೋವಾ ವಿರೋಧ ಪಕ್ಷಗಳು ವಿರೋಧಿಸುತ್ತಿವೆ.
ನದಿ ನೀರಿನ ತಿರುವು ವಿಚಾರ ನ್ಯಾಯಾಲಯ ಹಾಗೂ ಸಮತಿ ಮುಂದಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯು ನೀರಿನ ತಿರುವಿಗೆ ಸಂಬಂಧಿಸಿದಂತೆ ನಿಖರವಾಗಿ ಏನನ್ನು ಅನುಮತಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.

ನೀರಿನ ಸಮಸ್ಯೆ ಮುಖ್ಯ ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ, ಯೋಜನಾ ಸ್ಥಳದಲ್ಲಿ ಬರುವ ಪರಿಸರ ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯದ ಸಂರಕ್ಷಣೆಯೂ ಅಷ್ಟೇ ಮುಖ್ಯ. ಇದನ್ನು ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರವಾಹ (ಸಮಿತಿ) ಶೀಘ್ರದಲ್ಲೇ ಯೋಜನೆಯ ಸ್ಥಳವನ್ನು ಪರಿಶೀಲಿಸಲಿದೆ. ಈಗಾಗಲೇ ಕೆಲ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ತೀರ್ಪು ಬರಲಿದೆ ಎಂದು ನಾನು ಭಾವಿಸುತ್ತೇನೆ.
.

Author

error: