ನಿಜ ಜೀವನದಲ್ಲಿ ತಂದೆ ಮಗಳು. ಸಿನಿಮಾದಲ್ಲೂ ತಂದೆ ಮಗಳು.. ಇದು ಅಪರೂಪದಲ್ಲಿ ಅಪರೂಪ…

Actor Duniya Vijay; ದುನಿಯಾ ವಿಜಯ್ ಅವರ ಮಗಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅದೂ ಅಪ್ಪನ ಸಿನಿಮಾದಲ್ಲಿ. ಅದೂ ಮಗಳ ಪಾತ್ರದಲ್ಲಿ. ಈಕೆ ಕೂಡ ಸಿನಿಮಾ ಸಹವಾಸದಲ್ಲಿ ಬೆಳೆದವಳು

ಹಲವು ಖ್ಯಾತ ನಾಮರು ತಮ್ಮ ಮಕ್ಕಳು ಸಿನಿಮಾ ರಂಗಕ್ಕೆ ಬರಲಿ ಎಂದು ಆಸೆ ಪಡುವುದು ತುಂಬಾ ಸಹಜ. ಹಾಗೆ ಹಲವರು ಬಂದಿದ್ದಾರೆ. ಡಾ, ರಾಜಕುಮಾರ್ ಅವರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಇನ್ನೂ ಹಲವರ ಪಟ್ಟಿ ಮಾಡಬಹುದು. ಆದರೆ ತಂದೆ ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಿದ ಉದಾಹರಣೆ ಕೂಡ ಇದೆ. ಆದರೆ ನಿಜ ಜೀವನದಲ್ಲಿ ತಂದೆ ಮಗಳಾಗಿರುವವರು ಸಿನಿಮಾದಲ್ಲೂ ತಂದೆ ಮಗಳಾಗಿ ನಟಿಸಿದ್ದು ಅಪರೂಪದಲ್ಲಿ ಅಪರೂಪ.

ಈಗ ಅಂತಹ ಸಾಧನೆ ಮಾಡುತ್ತಿರುವವರು ದುನಿಯಾ ವಿಜಯ್ ಅವರ ಮಗಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅದೂ ಅಪ್ಪನ ಸಿನಿಮಾದಲ್ಲಿ. ಅದೂ ಮಗಳ ಪಾತ್ರದಲ್ಲಿ. ಈಕೆ ಕೂಡ ಸಿನಿಮಾ ಸಹವಾಸದಲ್ಲಿ ಬೆಳೆದವಳು. ಚಿಕ್ಕ ಮಗಿವಾಗಿದ್ದಾಗಲೇ ಪಾತ್ರವೊಂದರಲ್ಲಿ ಕಾಣಿಸಿಕೊಂಡವಳು. ಹೀಗಾಗಿ ನಟನೆ ಅವಳ ಆಸಕ್ತಿಯಾಗಿತ್ತು. ತಾನೂ ನಟಿಯಾಗಬೇಕು ಎಂಬ ಬಯಕೆ.

ಕೆಲವು ದಿನಗಳ ಹಿಂದೆ ಅಪ್ಪ ಮಗಳಿಗೆ ಹೇಳಿದರಂತೆ. ಸಿನಿಮಾದಲ್ಲಿ ತುಂಬಾ ಒಳ್ಳೆಯ ಪಾತ್ರ ಇದೆ. ಮಾಡ್ತೀಯಾ ? ಸರಿ ಆಕೆಗೆ ಖುಷಿಯೂ ಖುಷಿ. ಅಪ್ಪನ ಜೊತೆ ಮೊದಲ ಸಿನಿಮಾ. ಅದೂ ಅಪ್ಪನ ಮಗಳಾಗಿ. ಆಕೆ ಬಯಸಿದ್ದು ಅದೇ ಆಗಿತ್ತು. ತಿರುಗಿ ಮಾತನಾಡದೇ ಒಪ್ಪಿಬಿಟ್ಟರು.

ಈಗ ಸಿನಿಮಾ ಎಲ್ಲರ ನಿರೀಕ್ಷೆಗೆ ಕಾರಣವಾಗಿದೆ. ದುನಿಯಾ ವಿಜಯ್ ಕೂಡ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಗಳು ಮೊನಿಕಾ ಚಿತ್ರರಂಗ ಪ್ರವೇಶಿಸುವುದು ಅವರಿಗೆ ಸಂತೋಷದ ವಿಚಾರ. ಜೊತೆಗೆ ತನ್ನ ಸಿನಿಮಾದಲ್ಲಿ ಮಗಳಾಗಿ ನಟಿಸುವುದು ಇನ್ನಷ್ಟು ಸಂತೋಷವನ್ನು ಉಂಟು ಮಾಡಿದೆ.

ನಮಗೆಲ್ಲ ನಮ್ಮ ಮಕ್ಕಳ ಬಗ್ಗೆ ಕನಸುಗಳಿರುತ್ತವೆ. ನನಗೂ ಹಾಗೆ. ಕನಸು ಈಡೆರುವ ಸಮಯ ಬಂದಾಗ ಇನ್ನಷ್ಟು ಸಂತೋಷ ಸಹಜ ತಾನೆ.

Author

error: