ಶಿವಮೊಗ್ಗ : ಪಕ್ಷದ ವರಿಷ್ಠರ ವಿರುದ್ಧವೇ ಸೆಡ್ಡು ಹೊಡೆದಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸುವಾಗ ಅವರ ಕುಟುಂಬ ವರ್ಗದವರು ಅವರ ಜೊತೆಗಿದ್ದರು.
ನಾಮಪತ್ರ ಸಲ್ಲಿಸಲು ಅವರು ಮೆರವಣಿಗೆಯಲ್ಲಿ ಬಂದರು. ಅವರ ಜೊತೆಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಅಹಿಂದ ನಾಯಕ ಮುಕುಡಪ್ಪ ಮೊದಲಾದವರು ಜೊತೆಗಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ನನ್ನ ನಿರೀಕ್ಷೆ ಮೀರಿ ಜನ ಬಂದಿದ್ದಾರೆ. ಇದೇ ನಾನು ಪಕ್ಷೇತರನಾಗಿ ಚುನಾವಣೆ ಸ್ಪರ್ಧಿಸುತ್ತಿರುವುದಕ್ಕೆ ಸಾಕ್ಷಿ ಎಂದರು.
ಮೆರವಣಿಗೆಯಲ್ಲಿ ಬಂದವರ ಕೈಯಲ್ಲಿ ಹಿಂದೂ ಭಗವಾ ಜೇಂಡಾ ಇತ್ತು. ಮೆರವಣಿಗೆ ವಾಹನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕಲಾಗಿತ್ತು ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಸಮಯವಿದೆ ಎಂದರು.
ಈ ಮೂಲಕ ಈಶ್ವರಪ್ಪನವ ರ ಮನವೊಲಿಸುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.







