ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇವತ್ತು ಸಿಟ್ಟು ಬಂದಿತ್ತು. ಅದು ಕಾಂಗ್ರೆಸ್ ನಾಯಕರ ಮೇಲೆ. ನನ್ನ ತೋಟದ ಮನೆ ನನ್ನ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿಯವರಿಗೆ ಕೇಶವ ಶಿಲ್ಪ ಇದ್ದಂತೆ. ಅದು ನನ್ನ ಪಕ್ಷದ ಹೆಡ್ ಆಫೀಸ್. ನನ್ನ ತೋಟದ ಮನೆಯನ್ನು ಹೆಡ್ಡಾಫೀಸು ಮಾಡಿಕೊಳ್ಳದೇ ಕಾಂಗ್ರೆಸ್ ಕಚೇರಿಯನ್ನ ಹೆಡ್ದಾಫೀಸು ಮಾಡಿಕೊಳ್ಳೋದು ಸಾಧ್ಯಾನಾ ? ಎಂದು ಅವರು ಗುಡುಗಿದರು.
ಆಗಲೇ ಅವರ ತೋಟದ ಮನೆಗೆ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ವರದಿ ಬಂದಿತ್ತು. ಅವರು ಮನೆಯಲ್ಲಿ ನಡೆಸಲು ಉದ್ದೇಶಿಸಿದ್ದ ಔತಣಕೂಟ ರದ್ದಾಗಿತ್ತು. ಇದರಿಂದ ಅವರ ಕೋಪ ಇನ್ನಷ್ಟು ಹೆಚ್ಚಾಗಿತ್ತು. ಚುನಾವಣಾಧಿಕಾರಿಗಳ ತನಿಖೆಯ ಬಗ್ಗೆಯೂ ಕುಮಾರಸ್ವಾಮಿ ಹರಿಹಾಯ್ದರು.
ನನ್ನ ತೋಟದ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದು ನಮ್ಮ ಸಂಪ್ರದಾಯ. ಇವರು ಯಾರೋ ತಹಶೀಲ್ದಾರರ ಮೇಲೆ ಒತ್ತಡ ಮನೆಯಲ್ಲಿ ಪ್ರತಿದಿನ 120 ಜನ ಕೆಲಸ ಮಾಡ್ತಾರೆ. ಇವತ್ತು ಹೊಸ ವರ್ಷದ ಮೊದಲ ದಿನವಾದ್ದರಿಂದ ಅವರಿಗಾಗಿ ಹಾಕಿ ಕಳಿಸಿದ್ದಾರೆ ಎಂದು ಅವರು ದೂರಿದರು.
ತಮ್ಮ ತೋಟದ ಮನೆಯಲ್ಲಿ ಔತಣ ಕೂಟದ ವ್ಯವಸ್ಥೆ ಮಾಡಿರಲಿಲ್ಲ ಎಂದು ಅವರು ಹೇಳಿದರೂ ಔತಣ ಕೂಟದ ಸುದ್ದಿಯನ್ನು ಮೊದಲು ಪ್ರಕಟಿಸಿದವರೂ ಕುಮಾರಸ್ವಾಮಿಯವರೇ. ಆಗ ಅಧಿಕಾರಿಗಳು ತೋಟದ ಮನೆಯ ಪರಿಶೀಲನೆ ನಡೆಸಿರಲಿಲ್ಲ.







