ನವದೆಹಲಿ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಡೆಯುವ ಸ್ಥಾನ 4000 !
ನಿತೀಶ್ ಅವರಿಗೆ ಪಾಪ ವಯಸ್ಸಾಗಿದೆ. ಮಾತನಾಡುವಾಗ ಧ್ವನಿ ನಡುಗುತ್ತದೆ, ಜೊತೆಗೆ ಪಕ್ಷವನ್ನು ಬದಲಿಸಿ ಬದಲಿಸಿ ತಾವು ಯಾರ ಜೊತೆ ಇರುವುದು ಎಂಬುದೇ ಮರೆತುಹೋಗಿದೆ. ಹಾಗೆ ದೇಶದಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಎಂಬುದೂ ನೆನಪಿನಲ್ಲಿ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಈ ಎಡವಟ್ಟು ಮಾಡಿಕೊಂಡರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 4 ಲಕ್ಷ ಸ್ಥಾನಗಳನ್ನು ಪಡೆಯಲಿದೆ, ಅಲ್ಲ ಅಲ್ಲ, 4 ಸಾವಿರ ಸ್ಥಾನಗಳು ಅಲ್ಲವಾ ಪ್ರಧಾನಿಗಳೇ ಎಂದು ಮೋದಿ ಅವರತ್ತ ನೋಡಿದರು.
ಮೋದಿ ಅವರ ಪ್ರಕಾರ ಎನ್ ಡಿ ಎ 400 ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ. ನಿತೀಶ್ ಕುಮಾರ್ ಅವರ ಪ್ರಕಾರ 3 ಸಾವಿರ…!
ಕೆಲವರಿಗೆ ವಯಸ್ಸಾದಾಗ ಹೀಗೆ ಆಗುತ್ತದೆ. ಅದು ಮರೆವಿನ ರೋಗ, ನಿತೀಶ್ ಕುಮಾರ್ ಅವರ ಈ ಹೇಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಟ್ರೋಲ್ ಮೂಲಕವೇ ಚುನಾವಣೆ ಪ್ರಚಾರ ನಡೆಸುವ ಬಿಜೆಪಿ ನಿತೀಶ್ ಅವರಿಂದಾಗಿ ಇದನ್ನು ಅನುಭವಿಸುತ್ತಿದೆ. ನಿತೀಶ್ ಬಿಜೆಪಿಗೆ ಇನ್ಯಾವ ತೊಂದರೆ ಕೊಡುತ್ತಾರೋ ನೋಡಬೇಕು.
