ಗುಜರಾತ: ಕಳೆದ ಸೀಜನ್ ನಲ್ಲಿ ಮಿಂಚಿದ್ದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಮುಗ್ಗರಿಸುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ ಗುಜರಾತ್ ಗೆ ಸೋಲಿನ ರುಚಿ ತೋರಿಸಿತು. ಲಕ್ನೋಗೆ ತವರಿನಲ್ಲಿ 33 ರನ್ ಗಳ ಭರ್ಜರಿ ಗೆಲುವು.
ನಿನ್ನೆ ಅಟಲ್ಬಿಹಾರಿ ವಾಜಪೇಯಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು. ಗೆಲುವಿಗೆ 164 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡ 18.5 ಓವರ್ಗಳಲ್ಲಿ 130 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು.
ಮಾರ್ಕಸ್ ಸ್ಟೊಯ್ನಿಸ್ (43 ಎಸೆತಕ್ಕೆ 58 ರನ್) ಅರ್ಧ ಶತಕ ಹಾಗೂ ಬೌಲರ್ಗಳಾದ ಯಶ್ ಠಾಕೂರ್ (3.5 ಓವರ್, 30 ರನ್, 5 ವಿಕೆಟ್) ಹಾಗೂ ಕೃಣಾಲ್ ಪಾಂಡ್ಯ (4 ಓವರ್ 11 ರನ್, 3 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಜೈಂಟ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 33 ರನ್ಗಳಿಂದ ಸೋಲು ಅನುಭವಿಸಿತು.
ಇದು ಗುಜರಾತ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಮೂರನೇ ಸೋಲು. ಇದೇ ವೇಳೆ ಕೆ. ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ ಹ್ಯಾಟ್ರಿಕ್ ಜಯವನ್ನು ತನ್ನದಾಗಿಸಿಕೊಂಡಿದೆ.







